ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕು ಮಕ್ಕಳನ್ನು ಟಾರ್ಗೆಟ್ ಮಾಡುತ್ತಿದ್ದು, ಮೂರನೇ ಅಲೆ ಆರಂಭವಾದರೆ ಮಕ್ಕಳಲ್ಲಿ 7 ಪಟ್ಟು ಸೋಂಕು ಹೆಚ್ಚಳವಾಗಲಿದೆ ಎಂದು ಐಐಎಸ್ ಸಿ ತಜ್ಞರು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.
ಲಸಿಕೆ ಹಾಕಿರದ ಹಿನ್ನಲೆಯಲ್ಲಿ ಮೂರನೇ ಅಲೆಯಲ್ಲಿ ಮಕ್ಕಳಲ್ಲಿ ಸೋಂಕು ಹೆಚ್ಚು ಹರಡಬಹುದು ಎಂದು ಹೇಳಿದ್ದಾರೆ. ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಅಪಾಯಕಾರಿಯಾಗಿತ್ತು. ಎರಡನೇ ಅಲೆಯಲ್ಲಿ 2.5ಪಟ್ಟು ಸೋಂಕು ಹೆಚ್ಚಾಗುತ್ತಿದೆ. 19 ವರ್ಷದ ಒಳಗಿನ ಮಕ್ಕಳಲ್ಲಿ ಸೋಂಕು 2.5 ಪಟ್ಟು ಹೆಚ್ಚುತ್ತಿದೆ.
ಕೊರೊನಾ ಮೊದಲ ಅಲೆಯಲ್ಲಿ 92,480 ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿತ್ತು. ಎರಡನೇ ಅಲೆಯಲ್ಲಿ 2 ಲಕ್ಷ 28 ಸಾವಿರದ 203 ಮಕ್ಕಳಿಗೆ ಸೋಂಕು ಹರಡಿದೆ. ಮೂರನೇ ಅಲೆಯಲ್ಲಿ ಎರಡನೇ ಅಲೆಗಿಂತ ಹೆಚ್ಚು ಮಕ್ಕಳಿಗೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಆಂಬುಲೆನ್ಸ್ ಅಪಘಾತ; ಸ್ಥಳದಲ್ಲೇ ಮೂವರ ದುರ್ಮರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ