ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಬೆಳಗಾವಿ ದಕ್ಷಿಣ ಕ್ಷೇತ್ರ್ರದ ಜನರಿಗೆ 310 ರೂ ಮೌಲ್ಯದ ಔಷಧಿ ಕಿಟ್ ಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಕರೋನಾ ಹಾವಳಿ ಹೆಚ್ಚಾಗಿರುವ ಸಂದರ್ಭದಲ್ಲಿ ಕ್ಷೇತ್ರದ ಜನರ ಆರೋಗ್ಯದ ದೃಷ್ಟಿಯಿಂದ ನೆಗಡಿ, ಶೀತ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿರುವ ಕೆಲವೊಂದು ಜನರು ಅಕ್ಕಪಕ್ಕದ ಔಷಧ ಅಂಗಡಿಗಳಿಗೆ ಹೋಗಿ ಗುಳಿಗೆ ತೆಗೆದುಕೊಂಡ ನಂತರವು ಕಡಿಮೆಯಾಗದೆ ಇದ್ದಾಗ ಕೋವಿಡ್ ಪರೀಕ್ಷೆಗೆ ಒಳಗಾದ ಜನರಲ್ಲಿ ಕರೋನಾ ಪಾಸಿಟೀವ್ ಬಂದು ಸಂಖ್ಯೆ ಹೆಚ್ಚಾಗುತ್ತಿದೆ.
ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ, 5 ಪ್ರಕಾರದ (ಪ್ಯಾರಾಸಿಟಮಲ್, ಐವರಮೈಸಿಟಿನ್, ಸಿಟ್ರಿಜೀನ್, ಅಜೋಥ್ರೊಮೈಸಿನ್, ವಿಟ್ಯಾಮಿನ್ “ಸಿ”) ಗುಳಿಗೆಗಳಿರುವ ಕಿಟ್ ತಯಾರಿಸಿದ್ದಾರೆ.
ಈ ಒಂದು ಕಿಟ್ಟಿನ ಬೆಲೆ 310 ರೂಪಾಯಿಗಳಿದ್ದು, ಒಟ್ಟು 31 ಲಕ್ಷ ರೂಪಾಯಿಗಳನ್ನು ಈ ಮಹತ್ವದ, ಕಾರ್ಯಕ್ಕೆ ಖರ್ಚು ಮಾಡುತ್ತಿದ್ದು ಇಂದಿನಿಂದ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ