Kannada NewsKarnataka NewsLatest

ನಿಪ್ಪಾಣಿಯ ಎಂಜಿಎಂ ಆಸ್ಪತ್ರೆಯಲ್ಲಿ ಕೋವಿಡ್ ಸೆಂಟರ್  – ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ : ೨೩ ಆಕ್ಸಿಜನ್, ೪ ವೆಂಟಿಲೇರ್‌ಗಳ ಸಹಿತ ಒಟ್ಟು ೪೦ ಹಾಸಿಗೆಯುಳ್ಳ ಕೋವಿಡ್ ಸೆಂಟರ್ ಇನ್ನೇರಡು ದಿನಗಳಲ್ಲಿ ಎಂಜಿಎಂ ಆಸ್ಪತ್ರೆಯಲ್ಲಿ ಆರಂಭಗೊಳ್ಳಲಿದೆ.

ಸಂಪೂರ್ಣ ಎಂಜಿಎಂ ಆಸ್ಪತ್ರೆಯನ್ನು ಕರೊನಾ ವೈರಸ್ ಸೋಂಕಿತರಿಗಾಗಿ ಮೀಸಲಿಡಲಾಗುವುದು. ಇತರ ರೋಗಿಗಳಿಗೆ ಅದರ ಪಕ್ಕಕ್ಕಿರುವ ತಾಯಿ ಮತ್ತು ಮಕ್ಕಳ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಎಂಜಿಎಂ ನಂತರ ಜೊಲ್ಲೆ ಉದ್ಯೋಗ ಸಮೂಹದ ಜೊಲ್ಲೆ ಪಬ್ಲಿಕ್ ಸ್ಕೂಲ್‌ನಲ್ಲಿಯೂ ೧೬ ಆಕ್ಸಿಜನ್ ಸಹಿತ ೪೦ ಹಾಸಿಗೆಯುಳ್ಳ ಕೋವಿಡ್ ಸೆಂಟರ್ ಆರಂಭಿಸಲಾಗುವುದು. ಕ್ಷೇತ್ರ ನಾಗರಿಕರಿಗಾಗಿ ಉಚಿತ ಅಂಬ್ಯೂಲೆನ್ಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಎಲ್ಲರೂ ಸರಕಾರದ ನಿರ್ದೇಶನದಂತೆ ಸೂಚನೆಗಳನ್ನು ಪಾಲಿಸಿದಲ್ಲಿ ಕೋವಿಡ್-೧೯ರಿಂದ ನಾವೆಲ್ಲರೂ ಮುಕ್ತರಾಗಲು ಸಾಧ್ಯ. ಆದ್ದರಿಂದ ಎಲ್ಲರೂ ಮಾಸ್ಕ್ ಬಳಸಿ, ಸಾಮಾಜಿಕ ಅಂತರ ಕಾಪಾಡಿ ಸರಕಾರಕ್ಕೆ ಕೈಜೋಡಿಸಬೇಕು ಎಂದು ಕ್ಷೇತ್ರದ ಜನರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರಮನ್ ಚಂದ್ರಕಾಂತ ಕೋಠಿವಾಲೆ, ವಾಯಿಸ್-ಚೇರಮನ್ ಮಲಗೊಂಡಾ ಪಾಟೀಲ ಹಾಗೂ ಸಂಚಾಳಕರು, ಸ್ಥಳೀಯ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ ಹಾಗೂ ಸದಸ್ಯರು ಉಪಸ್ಥಿತರಿದ್ದರು.

 

ಕೊರೋನಾ ಸಾವು: ಲೆಕ್ಕ ತಪ್ಪಿದ್ದೆಲ್ಲಿ? ; ಅಂಜಲಿ ನಿಂಬಾಳಕರ್ ಎದುರೇ ಸಾವು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button