Belagavi NewsBelgaum NewsKarnataka NewsPolitics

*ಕಾಂಗ್ರೆಸ್ ಶಾಸಕರು ಸ್ವಾಭಿಮಾನಿಗಳು: ಲಕ್ಷ್ಮಣ ಸವದಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 50 ಕೋಟಿ ಅಲ್ಲ, 100 ಕೋಟಿ ರೂ. ಕೊಟ್ಟರೂ ಯಾರೂ ಬಿಜೆಪಿ ಆಮಿಷಕ್ಕೆ ಒಳಗಾಗುವುದಿಲ್ಲ. ಕಾಂಗ್ರೆಸ್ ಶಾಸಕರು ಸ್ವಾಭಿಮಾನಿಗಳು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ

ಬೆಳಗಾವಿ ಜಿಲ್ಲೆಯ ಕಾಗವಾಡನಲ್ಲಿ ಮಾದ್ಯಮಗಳ ಜೊತೆ ಮಾತನಾಡಿರುವ ಅವರು, ಮುಖ್ಯಮಂತ್ರಿಯವರು ಹೀಗೆ ಹೇಳಿದ್ದಾರೆಂದರೆ ಅವರ ಬಳಿ ಬಲವಾದ ಸಾಕ್ಷ್ಯ ಇರಬಹುದು. ಅದಕ್ಕೆ ಅವರು ಹೇಳಿರಬಹುದು. ಏನೇ ಮಾಡಿದರೂ ಬಿಜೆಪಿಯವರ ಕನಸು ನನಸಾಗದು ಎಂದು ಬಿಜೆಪಿಯವರು ಕಾಂಗ್ರೆಸ್‌ ಶಾಸಕರಿಗೆ ತಲಾ ರೂ.50 ಕೋಟಿ ಆಮಿಷ ಒಡ್ಡಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದರು

Home add -Advt

ನಮ್ಮ ಶಾಸಕರನ್ನು ಖರೀದಿಸಲು ಯಾರಿಗೂ ಸಾಧ್ಯವಿಲ್ಲ, ಏಕೆಂದರೆಯ ಅವರೆಲ್ಲರೂ ಸ್ವಾಭಿಮಾನಿಗಳು, ಪಕ್ಷದ ಸಮರ್ಪಿತ ಕಾರ್ಯಕರ್ತರಾಗಿದ್ದಾರೆ. ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿರಬಹುದು, ಆದರೆ, ಯಾವುದೇ ಸಂದರ್ಭದಲ್ಲೂ ಈ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಇಂತಹ ಪ್ರಯತ್ನಗಳಿಗೆ ನಮ್ಮ ನಾಯಕರು ಬೀಳುವುದಿಲ್ಲ ಎಂದು ತಿಳಿಸಿದರು.

Related Articles

Back to top button