ಪ್ರಗತಿವಾಹಿನಿ ಸುದ್ದಿ; ಛತ್ತೀಸ್ ಗಢ: ಕೊರೊನಾ ಲಸಿಕೆಗಳಿಗೆ ಇದೀಗ ಎಲ್ಲಿಲ್ಲದ ಬೇಡಿಕೆ ಹಾಗಾಗಿ ಲಸಿಕೆಗಳನ್ನೇ ಕಳ್ಳರು ಕದ್ದು ಪರಾರಿಯಾಗುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
ಹರ್ಯಾಣದ ಜಿಂದ್ ಪ್ರದೇಶದ ಆಸ್ಪತ್ರೆಯಿಂದ ಕೊರೊನಾ ಲಸಿಕೆಗಳನ್ನು ಕದ್ದ ಕಳ್ಳರು ಪೊಲೀಸ್ ಠಾಣೆಗೆ ಒಪ್ಪಿಸಿ ತಮ್ಮನ್ನು ಕ್ಷಮಿಸುವಂತೆ ಶರಣಾಗಿರುವ ಘಟನೆ ನಡೆದಿದೆ.
ಜಿಂದ್ ನಲ್ಲಿ ಆಸ್ಪತ್ರೆಯ ಶಟರ್ ಮುರಿದು ಒಳನುಗ್ಗಿದ್ದ ಇಬ್ಬರು ಕಳ್ಳರು 1,700 ಡೋಸ್ ಕೋವಿಡ್ ಲಸಿಕೆ ಬಾಕ್ಸನ್ನೇ ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ಮಾಧ್ಯಮಗಳ್ಲಲಿ ಸುದ್ದಿ ಪ್ರಸಾರವಗುತ್ತಿದ್ದಂತೆ ಹೆದರಿದ ಕಳ್ಳರು, ಲಸಿಕೆ ಬಾಕ್ಸ್ ನ್ನು ಪೊಲೀಸ್ ಠಾಣೆ ಎದುರು ತಂದಿಟ್ಟು, ತಮ್ಮನ್ನು ಕ್ಷಮಿಸಿ ಅದು ಕೊರೊನಾ ಲಸಿಕೆ ಎಂದು ಗೊತ್ತಿರಲಿಲ್ಲ ಎಂದು ಪತ್ರವನ್ನು ಬರೆದಿಟ್ಟು ತೆರಳಿದ್ದಾರೆ.
ನದಿಗೆ ಉರುಳಿದ ಜೀಪ್; 10 ಜನರು ಕಣ್ಮರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ