Latest

ನದಿಗೆ ಉರುಳಿದ ಜೀಪ್; 10 ಜನರು ಕಣ್ಮರೆ

ಪ್ರಗತಿವಾಹಿನಿ ಸುದ್ದಿ; ಪಾಟ್ನಾ: ಪ್ರಯಾಣಿಕರ ಜೀಪ್ ಗಂಗಾ ನದಿಗೆ ಉರುಳಿಬಿದ್ದ ಪರಿಣಾಮ 10 ಜನರು ಕಣ್ಮರೆಯಾಗಿರುವ ಘಟನೆ ಬಿಹಾರದ ಪಾಟ್ನಾದಲ್ಲಿನ ಪೀಪಾಪುಲ್ ಎಂಬಲ್ಲಿ ನಡೆದಿದೆ.

15 ಜನ ಪ್ರಯಾಣಿಕರಿದ್ದ ಜೀಪ್ ಪೀಪಾ ಸೇತುವೆ ಮೇಲೆ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬ್ರಿಡ್ಜ್ ನ ರೇಲಿಂಗ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರೇಲಿಂಗ್ ಮುರಿದು ಜೀಪ್ ನಿದಿಗೆ ಉರುಳಿದೆ. ಘಟನೆಯಲ್ಲಿ 10 ಪ್ರಯಾಣಿಕರು ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದಾರೆ.

ಸ್ಥಳಕ್ಕೆ ರಕ್ಷಣಾ ಸಿಬ್ಬಂದಿಗಳು, ಪೊಲೀಸರು ದೌಡಾಯಿಸಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಸಾರ್ವಜನಿಕರಿಗೆ ಆರೋಗ್ಯ ಸಚಿವರ ಸಲಹೆ

Related Articles

Back to top button