ಪ್ರಗತಿವಾಹಿನಿ ಸುದ್ದಿ; ಮೈಸೂರು: ಇಡೀ ವಿಶ್ವವೇ ತತ್ತರಗೊಳ್ಳುವಂತೆ ಮಾಡುತ್ತಿರುವ ಕೊರೊನಾ ಸೋಂಕಿಗೆ ಇನ್ನೆರಡು ತಿಂಗಳಲ್ಲಿ ವ್ಯಾಕ್ಸಿನ್ ಬರಲಿದೆ ಎಂದು ವಿಜ್ಞಾನಿ ಪ್ರೊ.ಕೆ.ಎಸ್ ರಂಗಪ್ಪ ತಿಳಿಸಿದ್ದಾರೆ.
ಕೊರೊನಾ ಸೋಂಕು ಪತ್ತೆಯಾದ ಮೊದಲ ದಿನದಿಂದಲೇ ಸಂಶೋಧನೆಗಳು ಆರಂಭವಾಗಿವೆ. ಎಡ್ವರ್ಡ್ ಜೆನ್ನರ್ ಸಂಶೋಧನಾ ಕೇಂದ್ರದಲ್ಲಿ ಶಂಶೋಧನೆಗಳು ನಡೆಯುತ್ತಿದ್ದು, 6 ಸಾವಿರ ಜನ ಸಂಶೋಧನೆ ಮಾಡುತ್ತಿದ್ದಾರೆ. ಹಲವರ ಮೇಲೆ ಈಗಾಗಲೇ ಪ್ರಯೋಗಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
ಜನರು ಕೇವಲ ಕೊರೊನಾ ಸೋಂಕಿನಿಂದ ಮಾತ್ರ ಸಾಯುತ್ತಿಲ್ಲ. ಬೇರೆ ಬೇರೆ ಕಾಯಿಲೆಗಳಿಂದಲೂ ಸಾಯುತ್ತಿದ್ದಾರೆ. ಕೊರೊನಾ ಸೋಂಕು ಪ್ರಾಣಿಗಳಿಂದ ಬಂದಿದೆ ಎಂದು ದೃಢಪಟ್ಟಿದೆ. ಎರಡು ತಿಂಗಳಲ್ಲಿ ವ್ಯಾಕ್ಸಿನ್ ಲಭ್ಯವಾಗಲಿದ್ದು, 2 ಸಾವಿರಕ್ಕಿಂತ ಕಡಿಮೆ ದರದಲ್ಲಿ ಕೊವಿಡ್ ವ್ಯಾಕ್ಸಿನ್ ಜನಸಾಮಾನ್ಯರಿಗೆ ಸಿಗಲಿದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ