Belagavi NewsBelgaum NewsKannada NewsKarnataka NewsNational

*4 ಕೋಟಿ  ವೆಚ್ಚದ ರಸ್ತೆ  ಕಾಮಗಾರಿಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಚಾಲನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯಮಕನಮರಡಿ ಕ್ಷೇತ್ರದ  ವ್ಯಾಪ್ತಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ  ಇದ್ದಲಹೊಂಡ ಗ್ರಾಮದವರಿಗೆ 4 ಕೋಟಿ  ರೂ.  ವೆಚ್ಚದ ರಸ್ತೆ  ಅಭಿವೃದ್ಧಿ ಕಾಮಗಾರಿಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಚಾಲನೆ ನೀಡಿದರು.

ಲೋಕೋಪಯೋಗಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವ  ಸತೀಶ್ ಜಾರಕಿಹೊಳಿ ಅವರ ಅನುದಾನದಲ್ಲಿ ಸಚಿವರ ಸೂಚನೆ ಮೇರೆಗೆ ಯಮಕನಮರಡಿ ಕ್ಷೇತ್ರದ ರಸ್ತೆ ಅಭಿವೃದ್ಧಿ ಕಾಮಗಾರಿಗೆ  ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹಾಗೂ  ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಯ ಯುವ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ ಅವರು ಭೂಮಿ  ಪೂಜೆ  ನೆರವೇರಿಸಿದರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಎಸ್ ಟಿ ಘಟಕದ ಅಧ್ಯಕ್ಷ ರಾಮಣ್ಣ   ಗುಳ್ಳಿ, ಆಪ್ತ ಸಹಾಯಕ ಮಲಗೌಡ ಪಾಟೀಲ್ , ಸಿದ್ದು ಸುಣಗಾರ,  ಜಂಗ್ಲಿಸಾಬ ನಾಯಿಕ,  ಸಿದ್ದಿಕ ಅಂಕಲಗಿ,  ಗ್ರಾ ಪಂ ಅಧ್ಯಕ್ಷ  ಸಿದ್ದಪ್ಪಾ  ಹೂಳಿಕಾರ,  ಭೀಮನಗೌಡ ಪಾಟೀಲ್ ,  ಬೈರು ಕಾಂಬಳೆ , ಸದಸ್ಯರು  ಹಾಗೂ ಇತರರು ಇದ್ದರು.

Home add -Advt

Related Articles

Back to top button