Belagavi NewsBelgaum NewsKannada NewsKarnataka NewsLatest

*ಕ್ರಿಕೆಟ್ ಬೆಟ್ಟಿಂಗ್ ಹಣಕ್ಕಾಗಿ ಜಗಳ; ಇಬ್ಬರ ಮೇಲೆ ಬ್ಲೇಡ್ ನಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು*

ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಕ್ರಿಕೆಟ್ ಬೆಟ್ಟಿಂಗ್ ಹಣದ ವಿಚಾರವಾಗಿ ಜಗಳ ನಡೆದು ಇಬ್ಬರ ಮೇಲೆ ಬ್ಲೇಡ್ ನಿಂದ್ ಹಲ್ಲೆ ನಡೆಸಿರುವಘಟನೆ ಖಾನಾಪೂರ ತಾಲೂಕಿನ ಲೋಂಡಾ ಗ್ರಾಮದಲ್ಲಿ ನಡೆದಿದೆ.

Related Articles
Home add -Advt

ಹಲ್ಲೆಗೊಳಗಾದ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಲೋಂಡಾ ಗ್ರಾಮದ ನಿವಾಸಿ ಅಲ್ತಮೇಶ್ ನಾಯಕ್ ಮತ್ತು ಇರ್ಫಾನ್ ಸುಭಾನಿ ಎಂದು ಗುರುತಿಸಲಾಗಿದೆ.

ದಾಳಿ ಮಾಡಿದ ಆರೋಪದ ಅಡಿಯಲ್ಲಿ ಬೆಳಗಾವಿ ನಿವಾಸಿ ಆಸಿಫ್ ಜಮಾದಾರ ಮತ್ತು ಉಮರ್ ಶೇಖ್ ನನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ

ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಹಣಕಾಸಿನ ವ್ಯವಹಾರದಲ್ಲಿ ಲೋಂಡಾ ಗ್ರಾಮದ ಇರ್ಫಾನ್ ಬೆಳಗಾವಿಯ ಒಬ್ಬನಿಗೆ ಹಣ ಬಾಕಿ ಉಳಿಸಿಕೊಂಡಿದ್ದ. ಆರೋಪಿಗಳು ಹಣಕೇಳಲು ಲೋಂಡಾ ಗ್ರಾಮಕ್ಕೆ ಬಂದಾಗ ಮಾತಿನ ಚಕಮಕಿ ನಡೆದು ದೊಡ್ಡ ಜಗಳವಾಗಿದೆ. ಈ ವೇಳೆ ಬ್ಲೇಡ್ ನಿಂದ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಗಾಯಗೊಂಡವರಿಗೆ ಲೋಂಡಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ತದನಂತರ ಬೆಳಗಾವಿಗೆ ರವಾನಿಸಲಾಗಿದೆ.


Related Articles

Back to top button