Kannada NewsKarnataka NewsLatest

*ಕ್ರಿಕೆಟರ್ ಕೆ.ಸಿ.ಕಾರಿಯಪ್ಪ ವಿರುದ್ಧ ಯುವತಿ ದೂರು ದಾಖಲು; ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು ಮೋಸ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕ್ರಿಕೆಟಿಗ ಕೆ.ಸಿ.ಕಾರಿಯಪ್ಪ ವಿರುದ್ಧ ಯುವತಿಯೊಬ್ಬರು ಗಂಭೀರ ಆರೋಪ ಮಾಡಿದ್ದು, ತನ್ನನ್ನು ಮದುವೆಯಾಗುವುದಾಗಿ ಹೇಳಿ ದೈಹಿಕವಾಗಿ ಬಳಸಿಕೊಂಡು ಕೈಕೊಟ್ಟಿದ್ದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕರ್ನಾಟಕ ಕ್ರಿಕೆಟರ್, ರಣಜಿ, ಐಪಿಎಲ್ ಆಟಗಾರರಾಗಿರುವ ಕೆ.ಸಿ.ಕಾರಿಯಪ್ಪ ಇನ್ ಸ್ಟಾಗ್ರಾಂ ನಲ್ಲಿ ಪರಿಚಯವಾಗಿದ್ದರು. ಇಬ್ಬರದ್ದೂ ಒಂದೇ ಊರು. ಸ್ನೇಹಿತರಾಗಿದ್ದೆವು. ಬಳಿಕ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಮನೆಯವರಿಗೂ ಪರಿಚಯ ಮಾಡಿಸಿಕೊಟ್ಟು ಮೋಸ ಮಾಡಿದ್ದಾರೆ. ಅಲ್ಲದೇ ತನ್ನನ್ನು ಗರ್ಭಿಣಯನ್ನಾಗಿ ಮಾಡಿ ಮಾತ್ರೆ ಕೊಟ್ಟು ಅಬಾರ್ಷನ್ ಮಾಡಿದ್ದಾಗಿ ಯುವತಿ ಆರೋಪಿಸಿದ್ದಾರೆ.

ತನ್ನನ್ನು ಅವಾಯ್ಡ್ ಮಾಡಲು ಶುರು ಮಾಡಿದ್ದರು. ಈ ವೇಳೆ ಅವರ ಮೊದಲ ಗರ್ಲ್ ಫ್ರೆಂಡ್ ತನಗೂ ಮೋಸ ಮಾಡಿದ್ದಾಗಿ ಹೇಳಿದ್ದರು. ಇದರಿಂದ ತಾನೂ ಮೋಸ ಹೋಗಿದ್ದಾಗಿ ಗೊತ್ತಾಗುತ್ತಿದ್ದಂತೆ ಬಾಗಲಗುಂಟೆ ಠಾಣೆಯಲ್ಲಿ ದೂರು ನೀಡಿದ್ದೆ. ದೂರು ದಾಖಲಾಗುತ್ತಿದ್ದಂತೆ ಕೇಸ್ ಹಿಂಪಡೆಯುವಂತೆ ಹೇಳಿ ಮದುವೆಯಾಗುವುದಾಗಿ ನಂಬಿಸಿದ್ದರು. ಅಲ್ಲದೇ ಮನೆಗೂ ಕರೆದುಕೊಂಡು ಹೋಗಿದ್ದರು.

ಡಿಸೆಂಬರ್ 22ರಂದು ಮನೆಗೆ ಹೋದಾಗ ನಾನು ಐಪಿಎಲ್ ನಲ್ಲಿ ಅನ್ ಸೋಲ್ಡ್ ಆಗಿದ್ದೀನಿ ಹಾಗಾಗಿ ಬೇಜಾರಲ್ಲಿದ್ದೇನೆ, ನನಗೆ ಟರಚರ್ ಕೊಡಬೇಡ ಎಂದು ಹೇಳಿ ವಾಪಾಸ್ ಕಳುಹಿಸಿದ್ದರು. ಯಾವುದಕ್ಕೂ ರೆಸ್ಪಾನ್ಸ್ ಮಾಡುತ್ತಿರಲಿಲ್ಲ. ಬಳಿಕ ನನ್ನ ವಿರುದ್ಧ ಬೆದರಿಕೆ ಹಾಕುತ್ತಿದ್ದಾಳೆ ಎಂದು ಹಾಗೂ ನಾನು ಡ್ರಗ್ಸ್ ಅಡಿಕ್ಟ್ , ನಡೆ ಸರಿಯಿಲ್ಲ ಎಂದು ಸುಳ್ಳು ಆರೋಪ ಮಾಡಿ ದೂರು ನೀಡಿದ್ದಾರೆ. ನಾನು ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ. ಕೇವಲ ಬೀಯರ್ ಮಾತ್ರ ತೆಗೆದುಕೊಳ್ಳುತ್ತೇನೆ. ಆದರೆ ಕೆ.ಸಿ.ಕಾರಿಯಪ್ಪ ಡ್ರಗ್ಸ್ ತೆಗೆದುಕೊಳ್ಳುತ್ತಾರೆ. ವಿಪರೀತ ಹಾರ್ಡ್ ಡ್ರಿಂಕ್ಸ್ ಮಾಡ್ತಾರೆ. ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಈಗ ನನ್ನ ವಿರುದ್ಧ ಇಲ್ಲದ ಆರೋಪ ಮಾಡುತ್ತಿದ್ದಾರೆ. ಯಾವುದೇ ತನಿಖೆಗೂ ನಾನು ಸಿದ್ಧ ಎಂದು ಯುವತಿ ಆರ್.ಟಿ.ನಗರ ಠಾಣೆಯಲ್ಲಿ ದೂರು ನೀಡಿದ್ದಾಳೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button