
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರೀತಿಸಿ ವಿವಾಹವಾಗಿದ್ದ ಸಿಆರ್ ಪಿಎಫ್ ಕಾನ್ಸ್ ಟೇಬಲ್ ಇದೀಗ ಪತ್ನಿಯನ್ನು ಬಿಟ್ಟು ನಾಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಗ್ರಾಮಾಂತರ ಜಿಲ್ಲೆ ನಂದಗುಡಿಯಲ್ಲಿ ನಡೆದಿದೆ.
ಎತ್ತಿನೊಡೆಯಪುರದ ಪ್ರಮೋದ್ ಅದೇ ಗ್ರಾಮದ ಅನುಜಾಳನ್ನು ಪ್ರೀತಿಸುತ್ತಿದ್ದ. ಎರಡು ತಿಂಗಳ ಹಿಂದೆ ಪ್ರಮೋದ್ ಸಿಆರ್ ಪಿಎಫ್ ಕ್ಯಾಂಪ್ ನಲ್ಲಿ ಅನುಜಾಳನ್ನು ವಿವಾಹವಾಗಿದ್ದ. ಆದರೆ ಈಗ ಹೆಂಡತಿಯನ್ನು ಬಿಟ್ಟು ಏಕಾಏಕಿ ಪರಾರಿಯಾಗಿದ್ದಾನೆ ಎಂದು ಪತ್ನಿ ನಂದಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಅಲ್ಲದೇ ಪತಿಯನ್ನು ಹುಡುಕಿಕೊಡುವಂತೆ ಆಗ್ರಹಿಸಿ ಅನುಜಾ ಹಾಗೂ ಆಕೆಯ ಕುಟುಂಬದವರು ಠಾಣೆಯ ಮುಂದೆ ಧರಣಿ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ