Latest

ಯೋಧನಿಂದಲೇ ಸಹಸೈನಿಕರ ಮೇಲೆ ಗುಂಡಿನ ದಾಳಿ; ಸಿಆರ್ ಪಿಎಫ್ ನಾಲ್ವರು ಯೋಧರು ಸಾವು

ಪ್ರಗತಿವಾಹಿನಿ ಸುದ್ದಿ; ರಾಯ್ಪುರ: ಯೋಧನೊಬ್ಬ ಸಹ ಸೈನಿಕರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ ಪರಿಣಾಮ ನಾಲ್ವರು ಸಿಆರ್ ಪಿಎಫ್ ಯೋಧರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಚತ್ತೀಸ್ ಗಢದ ಸುಕ್ಮಾದಲ್ಲಿ ನಡೆದಿದೆ.

ಇಲ್ಲಿನ ಮರೈಗುಡ ಪೊಲೀಸ್ ಠಾಣಾ ವ್ಯಾಪ್ತಿಯ ಲಿಂಗನಪಲ್ಲಿ ಗ್ರಾಮದಲ್ಲಿರುವ ಸಿಆರ್ ಪಿಎಫ್ 50ನೇ ಬೆಟಾಲಿಯನ್ ಶಿಬಿರದಲ್ಲಿ ಈ ಘಟನೆ ನಡೆದಿದೆ.

ರಿತೇಶ್ ರಂಜನ್ ಎಂಬ ಸಿಆರ್ ಪಿಎಫ್ ಯೋಧ ಇಂದು ಮುಂಜಾನೆ ಸಹ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದು, ರಾಜ್ ಮಾಣಿ ಕುಮಾರ್ ಯಾದವ್, ರಜಿಬ್ ಮೊಂಡಾಲ್, ಧಂಜಿ ಮತ್ತು ಧರ್ಮೇಂದ್ರ ಕುಮಾರ್ ಎಂಬ ಹೋಧರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 3 ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಿತೇಶ್ ತನ್ನ ಬಳಿಯಿದ್ದ ಸರ್ವಿಸ್ ವೆಪನ್ AK-47 ರೈಫಲ್ ನಿಂದ ಗುಂಡು ಹಾರಿಸಿದ್ದಾನೆ ಎಂದು ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಸುಂದರ್ ರಾಜ್ ಪಿ ಮಾಹಿತಿ ನೀಡಿದ್ದಾರೆ.
ಪದ್ಮಶ್ರೀ ಒಂದು ಗೌರವ, ಆದರೆ ಅಪ್ಪು ಯಾವತ್ತಿಗೂ ಅಮರಶ್ರೀ ಎಂದ ಶಿವರಾಜ್ ಕುಮಾರ್

Home add -Advt

Related Articles

Back to top button