ಆಧುನಿಕ ಆಹಾರ ಪದ್ಧತಿ ನಡುವೆ ಆರೋಗ್ಯದ ಬಗ್ಗೆ ಗಮನ ಹೆಚ್ಚಲಿ; ಬೆಳಗಾವಿಯ ಕಮಾಂಡೆಂಟ್ ಡಾ. ಕಿರಣ್ ರುದ್ರಾನಾಯ್ಕ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: “ಆಧುನಿಕ ಜೀವನ ಪದ್ಧತಿ ಹಾಗೂ ಆಹಾರ ಪದ್ಧತಿಯಿಂದ ಆರೋಗ್ಯದಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗುತ್ತವೆ. ಹೀಗಾಗಿ ಆರೋಗ್ಯದತ್ತ ನಮ್ಮೆಲ್ಲರ ಗಮನ ಹೆಚ್ಚಾಗಬೇಕಿದೆ” ಎಂದು ಗೃಹರಕ್ಷಕದಳ ಹಾಗೂ ಪೌರರಕ್ಷಣೆ ಇಲಾಖೆ ಬೆಳಗಾವಿಯ ಕಮಾಂಡೆಂಟ್ ಡಾ. ಕಿರಣ್ ರುದ್ರಾನಾಯ್ಕ ಕರೆ ನೀಡಿದರು.
ಸಿಎಸ್ ಆರ್ ಇನಿಶಿಯೆಟಿವ ರೈಟ್ಸ್ ಲಿಮಿಟೆಡ್ ಸಹಯೋಗದಲ್ಲಿ ಆಶ್ರಯ ಫೌಂಡೇಶನ್ ಬೆಳಗಾವಿ ವತಿಯಿಂದ ಬೆಳಗಾವಿ ಜಿಲ್ಲಾ ಗೃಹರಕ್ಷಕದಳ ಹಾಗೂ ಪೌರರಕ್ಷಣೆ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, “ರೋಗಗಳಿಗೆ ಬಡವ-ಶ್ರೀಮಂತರೆAಬ ಭೇದವಿಲ್ಲ. ಉಳ್ಳವರು ಸೂಕ್ತ ತಪಾಸಣೆ ಪಡೆದು ತಮ್ಮ ಆರೋಗ್ಯ ಕಾಪಾಡಿಕೊಳ್ಳುತ್ತಾರೆ. ಹೀಗಾಗಿ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುವ ಮೂಲಕ ಬಡವರ ಆರೋಗ್ಯ ಕಾಪಾಡುತ್ತಾರೆ. ಆ ನಿಟ್ಟಿನಲ್ಲಿ ಎರಡೂ ಸಂಸ್ಥೆಗಳು ಮಾಡುತ್ತಿರುವ ಕಾರ್ಯ ಶ್ಲಾಘನೀಯ” ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಇಂಡಿಯನ್ ಮೆಡಿಕಲ್ ಅಸೋಶಿಯೆಶನ ಪ್ರೆಸಿಡೆಂಟ್ ಡಾ. ರಾಜೇಶ್ವರಿ ಅನಗೋಳ ಮತ್ತು ಡಾ. ರವೀಂದ್ರ ಅನಗೋಳ ಆಗಮಿಸಿದ್ದರು. ಆರ್ಥೊ & ಟ್ರೋಮಾ ಸೆಂಟರ್ ವತಿಯಿಂದ ಡಾ. ಮಹಾದೇವಿ ಹಾಗೂ ಸಿಬ್ಬಂದಿ, ಇಂಡಿಯನ್ ಡೆಂಟಲ್ ಅಸೋಶಿಯೆಶನ್ ವತಿಯಿಂದ ಡಾ. ಬಿಂದು ಹೊಸಮನಿ ಮತ್ತು ಡಾ. ಅಶ್ವಿನಿ ನರಸಣ್ಣವರ, ಕಸಬೇಕರ ಮೆಟಗುಡ್ಡ ಹಾಸ್ಪಿಟಲ್ ವತಿಯಿಂದ ಡಾ. ಮಸ್ರತ ಖಾಜಿ, ಡಾ. ಜರೀನಾ ಹಾಗೂ ಸಿಬ್ಬಂದಿ, ಭರತೇಶ ಹೊಮಿಯೋಪಥಿಕ ಕಾಲೇಜ ವತಿಯಿಂದ
ಡಾ|| ಜಯರಾಜ ಪಾಟೀಲ, ಡಾ|| ಬಸವರಾಜ ಆದಿ, ಸಿದ್ಧಾರ್ಥ ನೇತ್ರಾಲಯ ಸುಪರ ಸ್ಪೆಶಾಲಿಟಿ ಆಸ್ಪತ್ರೆ ಡಾ|| ಸಿದ್ಧಾರ್ಥ ಪೂಜಾರಿ, ಕಮಲಾಬಾಯಿ ಆರ್ ಲಮಾಣಿ, ಸಹಾಯಕ ಬೋಧಕ ರಾಕೇಶ ಬಿ ಗೋನಾಳ, ಸ್ಟಾಫ್ ಆಫೀಸರ್ ಹಾಗೂ ಕಚೇರಿ ಸಿಬ್ಬಂದಿ ವರ್ಗದವರು ಮತ್ತು ಜಿಲ್ಲೆಯ ವಿವಿಧ ಘಟಕಗಳಿಂದ ಆಗಮಿಸಿದ ಗೃಹರಕ್ಷಕ ಸದಸ್ಯರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಗೃಹರಕ್ಷಕ/ಗೃಹರಕ್ಷಕೀಯರಿಗೆ ವಿವಿಧ ವಿಭಾಗಗಳಿಂದ ಸಾಮಾನ್ಯ ಆರೋಗ್ಯ ತಪಾಸಣೆ, ಮೂಳೆ ತಜ್ಞರು,ಸ್ರೀರೋಗ ತಜ್ಞರು, ಬಿ.ಪಿ.-ಸಕ್ಕರೆ, ರಕ್ತದ ಗುಂಪು ತಪಾಸಣೆ ಹಿಮೋಗ್ಲೋಬಿನ್, ನೇತ್ರ ತಪಾಸಣೆ, ದಂತ ತಪಾಸಣೆ ಮಾಡಿ ಉಚಿತವಾಗಿ ಚಿಕಿತ್ಸೆ ಹಾಗೂ ಮಾತ್ರೆಗಳು ಮತ್ತು ಪ್ರೋಟಿನ ಪೌಡರ್ ವಿತರಿಸಿದರು. ಎರಡು ನೂರಕ್ಕೂ ಹೆಚ್ಚು ಜನ ಇದರ ಸದುಪಯೊಗ ಪಡೆದುಕೊಂಡರು.
ಶಿಬಿರ ಯಶಸ್ವಿಯಾಗಲು ಆಶ್ರಯ ಸಂಸ್ಥೆಯ ಮಕ್ಕಳು ಹಾಗೂ ಸ್ವಯಂ ಸೇವಕರು ಮತ್ತು ಗೃಹರಕ್ಷಕದಳ ಹಾಗೂ ಪೌರರಕ್ಷಣೆ ಇಲಾಖೆ ಎಲ್ಲ ಸಿಬ್ಬಂದಿ ಇದ್ದರು. ಆಶ್ರಯಾ ಪೌಂಡೇಶನ್ ಮಕ್ಕಳ ಪ್ರಾರ್ಥನೆಯಿಂದ ಆರಂಭವಾದ ಕಾರ್ಯಕ್ರಮದಲ್ಲಿ ಆಶ್ರಯ ಫೌಂಡೇಶನ್ ಸಲಹಾ ಸಮೀತಿ ಸದಸ್ಯೆ ಡಾ|| ಅಶ್ವಿನಿ ಬಾಗೋಜಿ ನಿರೂಪಿಸಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಮಿಡಿಯುವ ಹೃದಯ ಶ್ರೀಮಂತಿಕೆ ಮೋದಿಯವರದ್ದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ