
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಅವರ ನಡೆಯ ಕುರಿತು ತೀವ್ರ ಕುತೂಹಲ, ವದಂತಿ ಹರಡಿದ್ದು ಅವರು ಎಲ್ಲವನ್ನೂ ಹೇಳಿದ್ದಾರೆ. ಅವರೊಂದಿಗೆ ಮತ್ತೆ ಚರ್ಚಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈಗಾಗಲೆ ಆನಂದ ಸಿಂಗ್ ಎಲ್ಲವನ್ನೂ ಹೇಳಿದ್ದಾರೆ. ನಾವು 30 ವರ್ಷದ ಒಡನಾಡಿಗಳು. ಹೇಳಬೇಕಾದದ್ದನ್ನೆಲ್ಲ ಹೇಳಿದ್ದಾರೆ. ನಾನು ಕೇಳಿದ್ದೇನೆ. ಮತ್ತೆ ಚರ್ಚಿಸುತ್ತೇನೆ. ಎಲ್ಲವೂ ಸರಿಯಾಗಲಿದೆ ಎಂದು ಅವರು ತಿಳಿಸಿದರು.
ಮಂಗಳವಾರ ತಮ್ಮ ಶಾಸಕ ಕಚೇರಿ ತೆರವುಗೊಳಿಸಿರುವ ಆನಂದ ಸಿಂಗ್ ಇಂದು ಬೆಳಗ್ಗೆಯಿಂದ ವಿಶೇಷ ಪೂಜೆಯಲ್ಲಿ ನಿರತರಾಗಿದ್ದಾರೆ. ಇದಾದ ನಂತರ ಬೆಂಗಳೂರಿಗೆ ಹೆಲಿಕಾಪ್ಟರ್ ಮೂಲಕ ತೆರಳುವುದಾಗಿ ತಿಳಿಸಿದ್ದಾರೆ.
ಇಂದೇ ಮುಖ್ಯಮಂತ್ರಿಗಳು ಆನಂದ ಸಿಂಗ್ ಜೊತೆ ಮಾತನಾಡುವ ಸಾಧ್ಯತೆ ಇದೆ.
ಇದೇ ವೇಳೆ ಇಂಧನ ಖಾತೆ ಹಂಚಿಕೆಯಾಗಿರುವ ಸುನೀಲ ಕುಮಾರ ಅರು ಈವರೆಗೂ ಅಧಿಕಾರ ಸ್ವೀಕರಿಸಿಲ್ಲ. ಇನ್ನು 3 ದಿನದ ನಂತರ ಅಧಿಕಾರ ಸ್ವೀಕರಿಸುವುದಾಗಿ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರವನ್ನು ಮಾತ್ರ ಅವರು ಇಂದು ಸ್ವೀಕರಿಸಲಿದ್ದಾರೆ. ಆನಂದ ಸಿಂಗ್ ಅವರಿಗೆ ಇಂಧನ ಖಾತೆಯನ್ನು ವಹಿಸಲಾಗುತ್ತದೆಯಾ ಎನ್ನುವ ಪ್ರಶ್ನೆ ಮೂಡಿದೆ. ಮುಖ್ಯಮಂತ್ರಿಗಳೇ ಇಂಧನ ಖಾತ ವಹಿಸಿಕೊಳ್ಳುವುದಕ್ಕೆ ಸುನೀಲ ಕುಮಾರ ಅವರಿಗೆ ತಡೆ ಒಡ್ಡಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.
ಬೆಂಗಳೂರಿನಲ್ಲಿ ಮಾತನಾಡಿದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ, ನನಗೆ ಖಾತೆ ಬದಲಾಯಿಸಿಕೊಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದಿದ್ದಾರೆ.
ಬುಗಿಲೆದ್ದ ಅಸಮಾಧಾನ: ಶಾಸಕರ ಕಚೇರಿ ತೆರವು; ಬುಧವಾರವೇ ಆನಂದ್ ಸಿಂಗ್ ರಾಜಿನಾಮೆ?