ಪ್ರಗತಿವಾಹಿನಿ ಸುದ್ದಿ, ಧಾರವಾಡ – ಅರಬ್ಬೀ ಸಮುದ್ರದ ಲಕ್ಷದ್ವೀಪ ಭಾಗದಲ್ಲಿ ಗಾಳಿಯ ಒತ್ತಡ ಕಡಿಮೆಯಾಗಿದ್ದು, ಮೇ 16ರಂದು ಚಂಡಮಾರುತ ಉಂಟಾಗುವ ಸಾಧ್ಯತೆ ಇದೆ.
ಧಾರವಾಡದ ಉತ್ತರ ಕರ್ನಾಟಕ ಕೃಷಿ ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಕೃಷಿ ಹವಾಮಾನಶಾಸ್ತ್ರ ವಿಭಾಗ ಈ ವಿಷಯ ತಿಳಿಸಿದೆ.
ಚಂಡಮಾರುತವು ಮೇ 18ರ ಸುಮಾರಿಗ ಉತ್ತರದಿಂದ ವಾಯವ್ಯ ದಿಕ್ಕಿಗೆ ಚಲಿಸಿ ಗುಜರಾತ್ ಮತ್ತು ಪಾಕಿಸ್ತಾನದ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆ ಇದೆ.
ಮೇ 15 ರಿಂದ 17 ಉತ್ತರ ಕನ್ನಡ ಜಿಲ್ಲೆಗೆ ರೆಡ್ (204.4 ಮಿಮೀ) ಅಲರ್ಟ್ ಮತ್ತು ಉಳಿದೆಲ್ಲ ಜಿಲ್ಲೆಗೆ ಆರೇಂಜ್ (115.6 -204.4 ಮಿಮೀ ) ಅಲರ್ಟ್ ಹಾಗೂ ಯಲ್ಲೋ (64.5 – 114.5 ಮಿಮೀ) ಅಲರ್ಟ್ ನೀಡಲಾಗಿದ್ದು, ಅಲ್ಲಲ್ಲಿ ಗುಡುಗ ಸಹಿತ ಭಾರಿ ಮಳೆಯಾಗುವ ಹಾಗೂ ಪ್ರತಿ ಗಂಟೆ 30 -40 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.
ಚಂಡಮಾರುತದಿಂದಾಗಿ ಎಲ್ಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ, ಜನರು ಹವಾಮಾನ ಇಲಾಖೆ ನೀಡುವ ಸೂಚನೆ ಆಧರಿಸಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.
ಸರ್ಕಾರದ ಕಠಿಣ ಕ್ರಮಗಳಿಂದ ರಾಜ್ಯದಲ್ಲಿ ಕೊರೋನಾ ಇಳಿಕೆ – ಯಡಿಯೂರಪ್ಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ