Latest

*ರಾಜ್ಯಕ್ಕೆ ಚಂಡಮಾರುತದ ವಾರ್ನಿಂಗ್ ನೀಡಿದ ಹವಾಮಾನ ಇಲಾಖೆ; ಮುಂಗಾರು ಮತ್ತಷ್ಟು ವಿಳಂಬ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಭಾಗಕ್ಕೆ ಚಂದಮಾರುತ ಅಪ್ಪಳಿಸಲಿದ್ದು, ಕಟ್ಟೆಚ್ಚರ ವಹಿಸುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅರಬ್ಬಿಸಮುದ್ರದ ಆಗ್ನೇಯ ಭಾಗದಲ್ಲಿ ವಾಯುಭಾರ ತೀವ್ರ ಕುಸಿತದಿಂದ ಚಂಡಮಾರುತವುಂಟಾಗಿದ್ದು, ಕರಾವಳಿ ಭಾಗದಲ್ಲಿ ಗಂಟೆಗೆ 60ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಬಿರುಗಾಳಿ ಜೊತೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಬಿಪರ್ ಜೋಯ್ ಚಂಡಮಾರುತದಿಂದಾಗಿ ಕರ್ನಾಟಕ, ಗೋವಾ, ಮಹಾರಾಷ್ಟ್ರ ಕರಾವಳಿ ಪ್ರದೇಶಗಳಲ್ಲಿ ಪರಿಣಾಮಬೀರಲಿದೆ.

ಒಂದೆಡೆ ಚಂಡಮಾರುತದ ಭೀತಿ ಇನ್ನೊಂದೆಡೆ ಮಳೆ ಕೊರತೆ ಆರಂಭವಾಗಿದೆ. ರಾಜ್ಯಕ್ಕೆ ಮುಂಗಾರು ಪ್ರವೇಶ ಇನ್ನಷ್ಟು ವಿಳಂಬವಾಗಲಿದೆ. ಚಂಡಮಾರುತದಿಂದಾಗಿ ಮುಂಗಾರು ವಿಳಂಬವಾಗಲಿದ್ದು, ಕೇರಳಕ್ಕೆ ಇನ್ನೂ ನಾಲ್ಕು ದಿನ ತಡವಾಗಿ ಮುಂಗಾರು ಪ್ರವೇಶವಾಗಲಿದೆ ಎಂದು ತಿಳಿದುಬಂದಿದೆ.

 

https://pragati.taskdun.com/karnatakabangalorerain-update/

 

https://pragati.taskdun.com/shri-nalwadi-krishnaraja-wadiyar-datti-awardh-d-devegowdakannada-sahitya-parishath/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button