
ಪ್ರಗತಿವಾಹಿನಿ ಸುದ್ದಿ : ಇಂದಿನಿಂದ ಹೊಸ ಅರ್ಥಿಕ ವರ್ಷ ಆರಂಭವಾಗಲಿದ್ದು, ಅನೇಕ ಉತ್ಪನ್ನಗಳ ಬೇಲೆ ಏರಿಕೆಯಾಗುತ್ತಿದೆ ಆದರೆ ತೈಲೋತ್ಪನ್ನ ಕಂಪನಿಗಳು ಅಡುಗೆ ಅನಿಲದರವನ್ನು ಇಳಿಕೆ ಮಾಡಿ ಗ್ರಾಹಕರಿಗೆ ಸಂತಸದ ಸುದ್ದಿ ನೀಡಿದೆ.
19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಇಂದಿನಿಂದ 41 ರೂ ಕಡಿಮೆಯಾಗಿದೆ. ನವದೆಹಲಿಯ ದರದಂತೆ ಇಂದಿನಿಂದ ವಾಣಿಜ್ಯ ಸಿಲಿಂಡರ್ 1762 ರೂ. ಗಳಿಗೆ ದೊರೆಯಲಿದೆ. 14.2 ಕೆಜಿಯ ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.