Kannada NewsKarnataka NewsLatest

ಡಿ.13ರಿಂದ 10 ದಿನ ಬೆಳಗಾವಿಯಲ್ಲಿ ಅಧಿವೇಶನ: ಅಧಿವೇಶನದ ವೇಳೆಯೇ ಪರಿಷತ್ ಚುನಾವಣೆ ಫಲಿತಾಂಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಪ್ರಸ್ತುತ ವಿಧಾನಸಭೆಯ 11ನೇ ಅಧಿವೇಶನ ಬೆಳಗಾವಿಯಲ್ಲಿ ಡಿಸೆಂಬರ್ 13ರಿಂದ ಆರಂಭವಾಗಲಿದ್ದು, 10 ದಿನ ಕಾರ್ಯಕಲಾಪ ನಡೆಯಲಿದೆ.

ಡಿ.13 ಸೋಮವಾರ 11 ಗಂಟೆಗೆ ಕಲಾಪ ಸೇರಲಿದ್ದು, ಡಿ.24 ಶುಕ್ರವಾರ ಮುಕ್ತಾಯವಾಗಲಿದೆ. ಡಿ.18 ಶನಿವಾರ ಮತ್ತು 19 ಭಾನುವಾರ ಕಲಾಪವಿರುವುದಿಲ್ಲ.

ಡಿ.14ರಂದು ವಿಧಾನಪರಿಷತ್ ನ 25 ಸ್ಥಾನಗಳ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ಅಂದು ಕಲಾಪ ಸಮರ್ಪಕವಾಗಿ ನಡೆಯುವ ಸಾಧ್ಯತೆ ಕಡಿಮೆ. ಪ್ರಸ್ತುತ ಸದಸ್ಯರಾಗಿರುವ ಈಗ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ 25 ಸದಸ್ಯರ ಅವಧಿ ಜನೆವರಿ 5ರಂದು ಮುಕ್ತಾಯವಾಗಲಿದ್ದು ಅವರು ಅಧಿವೇಶನದಲ್ಲಿ ಪೂರ್ಣಾವಧಿ ಭಾಗವಹಿಸಬಹುದು. 14ರಂದೇ ಫಲಿತಾಂಶ ಪ್ರಕಟವಾದರೂ ಜನೆವರಿ 5ರ ವರೆಗೆ ಹೊಸ ಸದಸ್ಯರು ಅಧಿಕೃತವಾಗಿ ಪರಿಷತ್ ಸದಸ್ಯರಾಗುವುದಿಲ್ಲ. ಹಾಗಾಗಿ ಅವರು ಪ್ರಸ್ತುತ ಅಧಿವೇಶನದಲ್ಲಿ ಭಾಗವಹಿಸುವಂತಿಲ್ಲ.

ಸಮಗ್ರ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ – Eleventh Session

Home add -Advt

 

ಬೆಳಗಾವಿಯಲ್ಲಿ ಮೊದಲ ನಾಮಪತ್ರ ಸಲ್ಲಿಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button