*ಡಿ.ಕೆ.ಶಿವಕುಮಾರ್ ಗೆ ಯಾರು ಕರೆದರು? ಯಾವಾಗ ಕರೆದರು? ಇಷ್ಟುದಿನ ಸುಮ್ಮನಿದ್ದು ಈಗ ಹೇಳಿಕೆ ಹಿಂದಿನ ತಂತ್ರವೇನು? ಆರ್.ಅಶೋಕ್ ಪ್ರಶ್ನೆ*

ಬೆಂಗಳೂರು: ಸಮ್ಮಿಶ್ರ ಸರ್ಕಾರದ ವೇಳೆ ಬಿಜೆಪಿಯಿಂದ ನನಗೆ ಆಫರ್ ಬಂದಿತ್ತು. ಡಿಸಿಎಂ ಹುದ್ದೆ ಬೇಕೋ? ಜೈಲುವಾಸ ಬೇಕೋ? ಎಂದು ಕರೆ ಮಾಡಿ ಬೆದರಿಕೆಯನ್ನೂ ಹಾಕಿದ್ದರು, ಆದರೆ ಪಕ್ಷ ನಿಷ್ಠೆಗಾಗಿ ನಾನು ಜೈಲಿಗೆ ಹೋಗಿದ್ದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಅಧಿಅಕರ ಹಂಚಿಕೆ, ಸಿಎಂ ಬದಲಾವಣೆ ವಿಚಾರವಾಗಿ ಚರ್ಚೆಗಳು ಮುನ್ನೆಲೆಗೆ ಬಂದ ಹೊತ್ತಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ನೀಡಿರುವ ಸ್ಫೋಟಕ ಹೇಳಿಕೆ ಹೊಸ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿಯಿಂದ ಆಫರ್ ಕೊಟ್ಟಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಗೆ ಬಿಜೆಪಿಯಿಂದ ಯಾರು ಕರೆದರು? ಯಾವಾಗ ಕರೆದರು? ಬಹಿರಂಗಪಡಿಸಲಿ. ಡಿಕೆಶಿಯವರು ಇಷ್ಟುದಿನ ಸುಮ್ಮನಿದ್ದು ಈಗ ಅಧಿಕಾರ ಹಸ್ತಾಂತರ ಸಮಯ ಬಂದಾಗ ಈ ಹೇಳಿಕೆ ನೀಡುತ್ತಿದ್ದಾರೆ ಅಂದರೆ ತಂತ್ರಗಾರ್ಕೆಯೇನು? ನವೆಂಬರ್ ಕ್ರಾಂತಿ ಆಗುತ್ತದೆ ಎಂದು ಈಗ ಹೇಳುತ್ತಿದ್ದಾರೆ ಎಂದರು.
ಡಿ.ಕೆ.ಶಿವಕುಮಾರ್ ಈ ಮೂಲಕ ಪಕ್ಕಾ ಮೆಸೇಜ್ ಕಳುಹಿಸಿದ್ದಾರೆ. ಧಮ್ಕಿ ಇದು. ನವೆಂಬರ್ ಕ್ರಾಂತಿ ಶುರುವಾಗುತ್ತೆ ಅಂತಾ ಹೇಳುತ್ತಿದ್ದಾರೆ ಎಂದಿದ್ದಾರೆ.