ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಅ.30ರಂದು ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆ ನಡೆಯಲಿದ್ದು, ಮಿನಿ ಸಮರದ ಅಖಾಡದಲ್ಲಿ ಬಿಜೆಪಿ ನಾಯಕರು ಹಣದ ಹೊಳೆ ಹರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಸಿಂದಗಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು ಪರ ಬಿಜೆಪಿ ಕಾರ್ಯಕರ್ತರು ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಮತದಾರರಿಗೆ ಬಿಜೆಪಿ ನಾಯಕರು ಕವರ್ ನಲ್ಲಿ 10 ಸಾವಿರ ರೂಪಾಯಿ ಹಣ ಅದರೊಂದಿಗೆ ರಮೇಶ್ ಬೂಸನೂರು ಫೋಟೋ ಹಾಗೂ ಬಿಜೆಪಿ ಚಿಹ್ನೆಯನ್ನೊಳಗೊಂಡ ಚೀಟಿ ಇಟ್ಟು ಕೊಡುತ್ತಿದ್ದಾರೆ ಎಂದು ಈ ಕುರಿತು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.
ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ಬಿಜೆಪಿ ಹಣ ಹಂಚಿಕೆ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದ ಡಿ.ಕೆ.ಶಿವಕುಮಾರ್, ಒಂದು ವೋಟ್ ಗೆ 10 ಸಾವಿರ ರೂಪಾಯಿಯಂತೆ ಬಿಜೆಪಿ ನಾಯಕರು ಹಣ ಹಂಚುತ್ತಿದ್ದಾರೆ. ಈ ರೀತಿ ಚುನಾವಣೆ ನಡೆಸಿದರೆ ಸಿಸ್ಟಮ್ ಉಳಿಯುತ್ತಾ? ಇದನ್ನು ಚುನಾವಣೆ ಎನ್ನಲ್ಲ, ಅತ್ಯಂತ ಭ್ರಷ್ಟ ಆಡಳಿತ ಎಂದು ಕರೆಯುತ್ತಾರೆ. ನನ್ನ ರಾಜಕೀಯ ಜೀವನದಲ್ಲೇ ಇಂತ ಘಟನೆ ನೋಡಿರಲಿಲ್ಲ. ಡಬಲ್ ಎಂಜಿನ್ ಸರ್ಕಾರ ಏನ್ ಮಾಡುತ್ತಿದೆ? ಮುಖ್ಯಮಂತ್ರಿಗಳು, ಪಕ್ಷದ ಅಧ್ಯಕ್ಷರು ಈ ಬಗ್ಗೆ ಉತ್ತರ ಕೊಡಲಿ ಎಂದು ಕಿಡಿಕಾರಿದ್ದಾರೆ.
ಸದ್ಯದಲ್ಲಿಯೇ 5000 ಶಿಕ್ಷಕರ ನೇಮಕ; ಶಿಕ್ಷಣ ಸಚಿವರ ಭರವಸೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ