Latest

ಸಿ.ಪಿ. ಯೋಗೇಶ್ವರ್ 15 ದಿನಗಳ ಹಿಂದೆ ನನ್ನ ಕಾಲು ಹಿಡಿದಿದ್ದ – ಡಿಕೆಶಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 15 ದಿನಗಳ ಹಿಂದಷ್ಟೇ ಶಾಸಕ ಸಿ.ಪಿ. ಯೋಗೇಶ್ವರ್ ನನ್ನ ಬಳಿ ಬಂದು ಕಾಂಗ್ರೆಸ್​ಗೆ ಸೇರಿಸಿಕೊಳ್ಳಿ ಎಂದು ಕಾಲು ಹಿಡಿದಿದ್ದ. ಆಗ ನಾನು ಬುದ್ಧಿ ಹೇಳಿ ವಾಪಾಸ್ ಕಳಿಸಿದ್ದೆ ಎಂದು ಕೆಪಿ ಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಹಗಲು ವೇಳೆ ಮಾತ್ರ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಾರೆ. ರಾತ್ರಿಯಾದರೆ ಮುಖ್ಯಮಂತ್ರಿಗಳ ಬಳಿ ಬಂದು ಕೆಲಸ ಮಾಡಿಸಿಕೊಳ್ಳುತ್ತಾರೆ ಎಂಬ ಸಿ.ಪಿ ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ, ಯಡಿಯೂರಪ್ಪ ಸಿಎಂ ಹುದ್ದೆಯಿಂದ ಕೆಳಗೆ ಇಳಿಸುತ್ತಿದ್ದಾರೆ. ಹೀಗಾಗಿ ನಾನು ಕಾಂಗ್ರೆಸ್‌ಗೆ ಬರುತ್ತೇನೆ ಎಂದು 15 ದಿನದ ಹಿಂದೆ ಯೋಗೇಶ್ವರ್‌ ನನ್ನ ಬಳಿ ಮನವಿ ಮಾಡಿಕೊಂಡಿದ್ದ ಆದರೆ ನಾನೇ ಬಿಜೆಪಿಯಲ್ಲೇ ನಿಷ್ಠೆಯಿಂದ ಇರುವಂತೆ ಹೇಳಿದ್ದೆ ಆದರೆ ಈಗ ನನ್ನ ವಿರುದ್ಧವೇ ಏಕೆ ಹೀಗೆ ಮಾತನಾಡಿದ್ದಾರೆ ಗೊತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಈಗ ಬಿಜೆಪಿಯಲ್ಲಿ ಎಂ ಎಲ್ ಸಿ ಸ್ಥಾನ ಸಿಗುತ್ತಿದ್ದಂತೆ ಎಲ್ಲ ಮರೆತು ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ಯೋಗೇಶ್ವರ್ ಮೆಂಟಲ್ ಆಗಿದ್ದಾರಾ ಎಂದು ಕಿಡಿಕಾರಿದರು.

ವಿಧಾನ ಪರಿಷತ್ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಸಿ.ಪಿ ಯೋಗೇಶ್ವರ್, ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆಶಿ ಸಹೋದರರು ಆಪರೇಷನ್ ಆರಂಭ ಮಾಡಿದ್ದಾರೆ. ಜೆಡಿಎಸ್ ಕಾರ್ಯಕರ್ತರಿಗೆ ಅವರ ಪಕ್ಷದಲ್ಲಿ ಭವಿಷ್ಯ ಇಲ್ಲ. ಆದ್ದರಿಂದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಬಿಜೆಪಿಗೆ ಬರಲಿ. ಡಿಕೆ ಶಿವಕುಮಾರ್ ಅವರು ಚುನಾವಣೆಯಲ್ಲಿ ಗೆಲುವು ಪಡೆಯಲು ಕುಮಾರಸ್ವಾಮಿ ಸಹಾಯ ತೆಗೆದುಕೊಂಡಿದ್ದರು. ಆದರೆ ಈಗ ಅವರ ನಡುವೆ ಒಗ್ಗಟ್ಟಿಲ್ಲ. ಇಬ್ಬರ ನಡುವೆ ಅಂತರ್ ಯುದ್ಧ ಆರಂಭವಾಗಿದೆ ಎಂದು ವ್ಯಂಗ್ಯವಾಡಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button