ಪ್ರಗತಿವಾಹಿನಿ ಸುದ್ದಿ; ಮೈಸೂರು: ಮಾಜಿ ಸಿಎಂ ಎಸ್.ಎಂ.ಕೃಷ್ಣ ಬಳಿಕ ನಮ್ಮ ಸಮುದಾಯಕ್ಕೆ ಸಿಎಂ ಆಗುವ ಅವಕಾಶವಿದೆ. ಆಯ್ಕೆ ಮಾಡುವ ಅವಕಾಶವನ್ನು ನಮ್ಮ ಸಮುದಾಯದವರು, ರಾಜ್ಯದ ಜನರು ಹಾಳು ಮಾಡಿಕೊಳ್ಳಬಾರದು ಎಂದು ಹೇಳುವ ಮೂಲಕ ತಾವು ಸಿಎಂ ಹುದ್ದೆಯ ಆಕಾಂಕ್ಷಿ ಎಂಬುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಪತ್ರಕರ್ತರ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ತಾವು ಸಿಎಂ ಹುದ್ದೆ ಆಕಾಂಕ್ಷಿ ಎಂಬುದನ್ನು ಸ್ಪಷ್ತವಾಗಿ ತಿಳಿಸಿದರು. ಕೆಪಿಸಿಸಿ ಅಧ್ಯಕ್ಷರಾದವರು ಮುಖ್ಯಮಂತ್ರಿಯಾಗುವುದು ಸಂಪ್ರದಾಯ. ಅದು ನಮ್ಮ ಪಕ್ಷ ಎಂದಲ್ಲ, ಎಲ್ಲ ಪಕ್ಷದಲ್ಲಿಯೂ ಅದು ಸಹಜ. ಎಸ್.ಎಂ.ಕೃಷ್ಣ ಬಳಿಕ ನಮ್ಮ ಸಮುದಾಯದ ನಾಯಕರಿಗೆ ಸಮರ್ಥ ಅವಕಾಶ ಲಭ್ಯವಾಗಿದೆ. ಸಿಎಂ ಆಗುವ ಅವಕಾಶವಿದೆ ಎಂದು ಹೇಳಿದ ಡಿ.ಕೆ.ಶಿವಕುಮಾರ್, ನಾನೇನು ಸನ್ಯಾಸಿನಾ? ಖಾವಿ ಹಾಕಿದ್ದೇನಾ? ನಾನು ಹಾಕಿರುವುದು ಖಾದಿ ಎಂದು ಹೇಳುವ ಮೂಲಕ ತಾವು ಕೂಡ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂಬುದನು ಸ್ಪಷ್ಟಪಡಿಸಿದರು.
ಕೇವಲ ಒಕ್ಕಲಿಗ ಸಮುದಾಯ ಮಾತ್ರವಲ್ಲ. ಎಲ್ಲಾ ಸಮುದಾಯದವರು, ಇಡೀ ರಾಜ್ಯದ ಜನತೆ ನನ್ನ ಜೊತೆ ನಿಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ. ಕಾಂಗ್ರೆಸ್ ನಲ್ಲಿ ಯಾವುದೇ ಬಣ ಇಲ್ಲ, ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದೇ ನಮ್ಮ ಉದ್ದೇಶ. ನನಗೆ ಪಕ್ಷ, ಪಕ್ಷದ ಧ್ವಜ ಮುಖ್ಯ. ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು ಆನಂತರ ಸಿಎಂ ಯಾರು ಆಗಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತೆ ಎಂದರು.
ನಾವು ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಡಿದ್ದೇವೆ. ಸಿದ್ದರಾಮಯ್ಯ ಅವಧಿಯಲ್ಲಿ ಜನರಿಗೆ ಕೊಟ್ಟ ಬಹುತೇಕ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ಆದರೆ ಬಿಜೆಪಿಯವರು ಕೊಟ್ಟ ಭರವಸೆಯಲ್ಲಿ ಶೇ.40ರಷ್ಟು ಈಡೇರಿಸಿಲ್ಲ. ಕೋವಿಡ್ ಸಂದರ್ಭದಲ್ಲಿ ಬೆಡ್, ಔಷಧಿ, ಆಕ್ಸಿಜನ್ ಕೊರತೆಯುಂಟಾಯಿತು. 20 ಲಕ್ಷ ಕೋಟಿ ರೂಪಾಯಿ ಪರಿಹಾರ ಹಣ ಕೊಡುತ್ತೇವೆ ಎಂದರು ಎಲ್ಲಿ ಕೊಟ್ಟರು? ಪಿಎಸ್ ಐ ನೇಮಕಾತಿಯಲ್ಲಿ ನಡೆದಷ್ಟು ದೊಡ್ದ ಹಗರಣ ಇನ್ನೆಲ್ಲೂ ನಡೆದಿಲ್ಲ. ಪೊಲೀಸ್ ಇಲಾಖೆ ಮಾತ್ರವಲ್ಲ ಬೇರೆ ಬೇರೆ ಇಲಾಖೆಗಳಲ್ಲಿಯೂ ಹಗರಣ ನಡೆದಿದೆ. 40% ಕಮಿಷನ್ ಹಗರಣವನ್ನೇ ಮುಚ್ಚಿ ಹಾಕಲಾಗುತ್ತಿದೆ. ಎಲ್ಲವೂ ಸಾಮಾಜಿಕವಾಗಿ ಚರ್ಚೆಯಾಗಲಿ ಎಂದು ಹೇಳಿದರು.
ರಾಜಕುಮಾರ್ ಟಾಕಳೆ ನನ್ನ ಗಂಡ; ಹೊಸ ಬಾಂಬ್ ಸಿಡಿಸಿದ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ
ಇದರ ಹಿಂದೆ ಯಾರದ್ದೋ ಕೈವಾಡ, ಷಡ್ಯಂತ್ರವಿದೆ; ಕಾಂಗ್ರೆಸ್ ನಾಯಕಿ ನವ್ಯಶ್ರೀ ಆರೋಪ
ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸಿಎಂಗೆ ಪತ್ರ ಬರೆದ ಮೇನಕಾ ಗಾಂಧಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ