
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಯಂಗ್ ಇಂಡಿಯಾಗೆ ದೇನಿಗೆ ವಿಚಾರಕ್ಕೆ ಸಂಅಬ್ಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಇಡಿ ಅಧಿಕಾರಿಗಳು ಮೂರನೇ ಬಾರಿ ಸಮನ್ಸ್ ನೀಡಿರುವ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ದೆಹಲಿಯ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.
ದೆಹಲಿಯಲ್ಲಿ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡಿ ಅಧಿಕಾರಿಗಳು ಒಂದಾದ ಮೇಲೆ ಒಂದರಂತೆ ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಕರೆಸಿಕೊಳ್ಳುತ್ತಿದ್ದಾರೆ. ಇಡಿ ವಿಚಾರಣೆಯಿಂದಾಇ ಜನರು ನನ್ನೊಂದಿಗೆ ವ್ಯವಹಾರ ಮಾಡಲು ಹೆದರುತ್ತಿದ್ದಾರೆ. ಹಲವರು ನನ್ನ ಫೋನ್ ಕೂಡ ರಿಸೀವ್ ಮಾಡಲು ಭಯ ಪಡುತ್ತಿದ್ದಾರೆ. ಅಂತ ಸ್ಥಿತಿಗೆ ತಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪದೇ ಪದೇ ಸಮನ್ಸ್ ನೀಡಿ ಅನಗತ್ಯವಾಗಿ ವಿಚಾರಣೆ ನಡೆಸುತ್ತಿದ್ದಾರೆ. ನನ್ನ ನೋವಿನ ಬಗ್ಗೆ ನಿಮ್ಮ ಬಳಿ ಹೇಳಿದರೆ ಪ್ರಯೋಜನವಾಗುತ್ತಾ? ಆ ನೋವೇನು ಎಂದು ನನಗೆ ಮಾತ್ರ ಗೊತ್ತು. ಇಷ್ಟಕ್ಕೂ ಯಂಗ್ ಇಂಡಿಯಾಗೆ ದೇಣಿಗೆ ಕೊಟ್ಟರೆ ತಪ್ಪೇನು? ಎಂದು ಪ್ರಶ್ನಿಸಿದರು.
ಮನಸ್ಸಿಗೆ ಬಂದಂತೆ ಸರ್ಕಾರ ನಡೆಸಿದ್ರೆ ಆಗಲ್ಲ; ರಾಜ್ಯದ ಜನ ಕೇಸರೀಕರಣ ಮಾಡಲು ಹೇಳಿದ್ದಾರಾ? ಸಿದ್ದರಾಮಯ್ಯ ವಾಗ್ದಾಳಿ
https://pragati.taskdun.com/politics/siddaramaiahattackbjp-govtkesarikaranaschools/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ