Latest

ಯಡಿಯೂರಪ್ಪನವರೇ, ಇದಕ್ಕಿಂತ ದೊಡ್ಡ ಸಾಕ್ಷ್ಯ ಏನು ಬೇಕು? – ಡಿ.ಕೆ.ಶಿವಕುಮಾರ್ ಪ್ರಶ್ನೆ

ನೀವೇ ರಾಜಿನಾಮೆ ಕೊಡಿ, ಇಲ್ಲವೇ ಈಶ್ವರಪ್ಪನವರನ್ನು ವಜಾ ಮಾಡಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿಗಳ ವಿರುದ್ಧ ಮಂತ್ರಿಯೊಬ್ಬರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. 1200 ಕೋಟಿ ರೂಪಾಯಿ ಹಗರಣದ ರೀತಿಯಲ್ಲಿ ರಾಜ್ಯಪಾಲರಿಗೆ ಪತ್ರದ ಮೂಲಕ ದೂರು ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಇಲ್ಲವೇ ಸಚಿವ ಈಶ್ವರಪ್ಪನವರನ್ನು ವಜಾಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸಿಎಂ ವಿರುದ್ಧ ಆರೋಪಿಸಿ ದೂರು ಕೊಟ್ಟಿರುವವರು ಸಾಮಾನ್ಯ ವ್ಯಕ್ತಿಯಲ್ಲ. ಸರ್ಕಾರದಲ್ಲಿ ಅವರೊಬ್ಬ ಹಿರಿಯ ಸಚಿವರು. ಒಂದೇ ಜಿಲ್ಲೆಯವರು. ಪಕ್ಷದ ರಾಜ್ಯಾಧ್ಯಕ್ಷರಾಗಿ ಕೆಲಸವನ್ನು ಮಾಡಿದವರು ಕೂಡ. ಹೀಗಿರುವಾಗ ಭ್ರಷ್ಟಾಚಾರ ನಡೆದಿದೆ ಎಂಬ ರೀತಿಯಲ್ಲಿ 1200 ಕೋಟಿ ರೂಪಾಯಿ ಹೇಳದೇ ಕೇಳದೇ ತಮ್ಮ ಇಲಾಖೆ ಹಣವನ್ನು ಶಾಸಕರಿಗೆ ನೀಡಲಾಗಿದೆ ಎಂದು ದೂರಿದ್ದಾರೆ. ಈ ಬಗ್ಗೆ ದಾಖಲೆಗಳನ್ನು ದೂರಿನಲ್ಲಿ ಸಲ್ಲಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿ ಸಿಎಂ ಯಡಿಯೂರಪ್ಪನವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಅನುದಾನದಲ್ಲಿ ತಾರತಮ್ಯ ಮಾತ್ರವಲ್ಲ ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪಮಾಡಿ ಅನುದಾನದ ಹಣವನ್ನು ಶಾಸಕರಿಗೆ ನೀಡಲಾಗಿದೆ ಎಂದು ಸರ್ಕಾರದ ಸಚಿವರೇ ಹೇಳಿದ್ದಾರೆ. ನಾವು ಈ ಹಿಂದೆ ಅನುದಾನದಲ್ಲಿ ತಾರತಮ್ಯವಾಗಿದೆ ಎಂದು ಹೇಳಿದ್ದೆವು. ಈಗ ಸಚಿವರೆ ಹೇಳುತ್ತಿದ್ದಾರೆ ಇದಕ್ಕಿಂತ ದೊಡ್ಡ ಸಾಕ್ಷ್ಯ ಏನು ಬೇಕು? ಎಂದು ವಾಗ್ದಾಳಿ ನಡೆಸಿದರು.

ನಾನು ಪತ್ರ ಬರೆದಿದ್ದು ಈ ಕಾರಣಕ್ಕಾಗಿ… : ಸಚಿವ ಈಶ್ವರಪ್ಪ ಸ್ಪಷ್ಟನೆ

Home add -Advt

Related Articles

Back to top button