
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಮಂಗಳಮುಖಿಯರಿಗೂ ಪೊಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಲಾಗಿದೆ.
ಇನ್ಮುಂದೆ ಮಂಗಳಮುಖಿಯರು ಕೂಡ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಬಹುದಾಗಿದ್ದು, ಅರ್ಜಿ ಆಹ್ವಾನಿಸಲಾಗಿದೆ. ಪೊಲಿಸ್ ಇಲಾಖೆಯಲ್ಲಿ ತಮಗೂ ಅವಕಾಶ ನೀಡಬೇಕೆಂದು ಮಂಗಳಮುಖಿಯರು ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮಂಗಳಮುಖಿಯರ ಬೇಡಿಕೆಗೆ ಸಮ್ಮಿತಿ ನೀಡಿದೆ.
ಈ ಹಿನ್ನೆಲೆಯಲ್ಲಿ ಕೆ ಎಸ್ ಆರ್ ಪಿ ಹಾಗೂ ಭಾರತೀಯ ರಿಸರ್ವ್ ಬೆಟಾಲಿಯನ್ ನ ವಿಶೇಷ ಮೀಸಲು ಉಪ ನಿರೀಕ್ಷಕರ ಹುದ್ದೆಗೆ ಪುರುಷ, ಮಹಿಳೆ ಹಾಗೂ ಮಂಗಳಮುಖಿಯರಿಗೆ ಅರ್ಜಿ ಸಲ್ಲಿಸಲು ಕೆ ಎಸ್ ಪಿ ಆಹ್ವಾನಿಸಲಾಗಿದ್ದು, ಅಧಿಸೂಚನೆ ಹೊರಡಿಸಲಾಗಿದೆ. ಪೊಲೀಸ್ ಇಲಾಖೆಯ ಎಲ್ಲಾ ವಿಭಾಗದಲ್ಲೂ ಶೇ.1ರಷ್ಟು ಮೀಸಲಾತಿ ನೀಡಲಾಗಿದೆ.
ಪೊಲೀಸ್ ಇಲಾಖೆ ಮಾಹಿತಿ ಪ್ರಕಾರ 70 ಸಬ್ ಇನ್ಸ್ ಪೆಕ್ಟರ್ ಪೋಸ್ಟ್ ಗಳ ನೇಮಕಕ್ಕೆ ಅರ್ಜಿ ಆಹ್ವಾನ ಮಾಡಲಾಗಿದೆ. www.recruitment.ksp.gov.in ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಎಲ್ಲಿಯೂ ಬಲವಂತದ ಮತಾಂತರ ನಡೆದಿಲ್ಲ – ಡಿ.ಕೆ.ಶಿವಕುಮಾರ್