*ಯತ್ನಾಳ್ ವಿರುದ್ಧ ಸದನದಲ್ಲಿ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ ಡಿಸಿಎಂ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭೆಯಲ್ಲಿ ವರ್ಗಾವಣೆ ದಂಧೆ ವಿಚಾರ ವಿಪಕ್ಷ ಬಿಜೆಪಿ ಹಾಗೂ ಆದಳಿತ ಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಕಾವೇರಿದ ಚರ್ಚೆಗೆ ಕಾರಣವಾಯಿತು.
ವಿಧಾನಸಭೆಯಲ್ಲಿ ವಿಜಯಪುರ ಮಹಾನಗರ ಪಾಲಿಕೆ ಅಧಿಕಾರಿಗಳ ನೇಮಕ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ವರ್ಗವಣೆ ದಂಧೆ ನಡೆಸಿದೆ ಎಂದು ಬಿಜೆಪಿ ಶಾಸಕ ಯತ್ನಾಳ್ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ವಾಕ್ಪ್ರಹಾರ ನಡೆಸಿದರು.
ಯತ್ನಾಳ್ ವಿರುದ್ಧ ಕಿಡಿ ಕಾರಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿಯವರಿಗೆ ಮೊದಲಿನಿಂದಲೂ ಅಧಿಕಾರಿಗಳ ವರ್ಗಾವಣೆ, ಸರ್ಕಾರಿ ಹುದ್ದೆಗಳ ಮಾರಾಟ ಮಾಡಿಕೊಂಡು ಅಭ್ಯಾಸವಿದೆ. ಇದನ್ನು ಸ್ವತಃ ಯತ್ನಾಳ್ ಅವರೇ ಹೇಳಿದ್ದಾರೆ. ಆದರೆ ಅವರು ನಮ್ಮ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು” ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯಲ್ಲಿ ಸಿಎಂ ಹುದ್ದೆಗೂ 2500ಕೋಟಿ ಮಂತ್ರಿ ಹುದ್ದೆಗೆ ಸಾವಿರಾರು ಕೋಟಿ ಹಣ ಎಲ್ಲವೀ ನಮಗೆ ಗೊತ್ತಿದೆ ಎಂದರು. ಡಿಸಿಎಂ ಹೇಳಿಕೆಗೆ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಕೆಂಡಾಮಂಡಲರಾದ ಡಿಸಿಎಂ, ಆರೋಪ ನಮ್ಮ ಬಳಿ ಎಲ್ಲಾ ದಾಖಲೆಗಳೂ ಇವೆ, ಸುಮ್ಮನೆ ಕುಳಿತುಕೊಳ್ಳಿ ಎಂದರು ಇದಕ್ಕೆ ಸುಮ್ಮನಾಗದ ಯತ್ನಾಳ್, ಡಿಕೆಶಿ ಭ್ರಷ್ಟಾಚಹರದ ಬಂಡೆ ಎಂದು ವಾಗ್ದಾಳಿ ನದೆಸಿದರು. ಇನ್ನಷ್ಟು ಆಕ್ರೋಶಗೊಂಡ ಡಿಸಿಎಂ ಡಿ.ಕೆ.ಶಿವಕುಮಾರ್, ಮಾತನಾಡುವಾಗ ಹಿಡಿತವಿರಲಿ, ನಿಮ್ಮ ಸಿಎಂ ನಿಮ್ಮ ಭಾಷಣಕ್ಕೆ ಸುಮ್ಮನಿದ್ದರು ಎಂದು ನಾವು ಸುಮ್ಮನಿರಲ್ಲ. ನಾನಾಗಿದ್ದರೆ ಅಂದೆ ಪಕ್ಷದಿಂದ ಡಿಸ್ ಮಿಸ್ ಮಾಡುತ್ತಿದ್ದೆ ಎಂದು ಗುಡುಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ