Kannada NewsKarnataka NewsLatest

*ಸಿಎಂ ಡಿ.ಕೆ.ಶಿವಕುಮಾರ್ ಮನೆ ಹಿಂಭಾಗದಲ್ಲಿ ವಾಮಾಚಾರ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬೆಂಗಳೂರಿನ ಸದಾಶಿವನಗರ ಮನೆಯ ಹಿಂಭಾಗದಲ್ಲಿ ಯಾರೋ ಮಾಟ, ಮಂತ್ರ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸಿಎಂ ಡಿ.ಕೆ.ಶಿವಕುಮಾರ್ ನಿವಾಸದ ಹಿಂಭಾಗದಲ್ಲಿರುವ ಜಿಬಿಎ ಮೈದಾನದ ಮುಂಭಾಗ ಮಾಟ-ಮಂತ್ರಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿವೆ. ವೃತ್ತಾಕಾರ ಹಾಕಿ, ಕೋಳಿ ಕೊಯ್ದು, ನಿಂಬೆಹಣ್ಣುಗಳನ್ನಿಟ್ಟು ಹೋಗಿದ್ದಾರೆ.

ವಾಮಾಚಾರ ನಡೆಸಿರುವ ಅನುಮಾನ ವ್ಯಕ್ತವಾಗಿದ್ದು, ಜನರು ಓಡಾಡುವ ಜಾಗದಲ್ಲಿಯೇ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಈ ಭಾಗದ ರಸ್ತೆಯಲ್ಲಿ ಮಕ್ಕಳು, ಸಾರ್ವಜನಿಕರು ಓಡಾಡು ಆತಂಕಪಡುತ್ತಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿದ್ದ ನಿಂಬೆಹಣ್ಣು, ಕೋಳಿಗಳನ್ನು ತೆರವುಗೊಳಿಸಿದ್ದಾರೆ. ಕೃತ್ಯವೆಸಗಿರುವವರ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button