Kannada NewsKarnataka NewsLatest

*ಪೋಕ್ಸೊ ಕೇಸ್‌ ನಲ್ಲಿ ಪೊಲೀಸ್ ಠಾಣೆಯಲ್ಲಿ ಲಂಚಕ್ಕೆ ಕೈಯೊಡ್ದಿದ್ದ ಲೇಡಿ ಕಾನ್ಸ್ ಟೇಬಲ್: ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ*

ಪ್ರಗತಿವಾಹಿನಿ ಸುದ್ದಿ: ಪೋಕ್ಸೊ ಕೇಸ್‌ ಗೆ ಸಂಬಂಧಿಸಿದಂತೆ ಲಂಚ ಪಡೆಯುತ್ತಿದ್ದ ಲೇಡಿ ಕಾನ್‌ಸ್ಟೇಬಲ್‌ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

ಕಲಬುರಗಿಯ ಸ್ಟೇಷನ್ ಬಜಾರ್ ಕಾನ್‌ಸ್ಟೇಬಲ್ ಜ್ಯೋತಿ‌ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಠಾಣೆಯಲ್ಲಿತೇ ಹತ್ತು ಸಾವಿರ ಹಣ ಪಡೆಯುವಾಗ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

Home add -Advt

ಚಿಂದಿ ಆಯುವ ಮಹಿಳೆಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಲೈಂಗಿಕ ದೌರ್ಜನ್ಯ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ‘ಪ್ರಕರಣದ ಚಾರ್ಜ್‌ಶೀಟ್ ದಾಖಲಿಸಲಾಗುತ್ತಿದೆ. ಕೇಸ್ ನಿಮ್ಮ‌ ಪರವಾಗಿ ಆಗುವಂತೆ ನೋಡಿಕೊಳ್ಳುತ್ತೇವೆ’ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು.‌

ಹಣ ಪಡೆಯುವಾಗ ಲೋಕಾ ಇನ್‌ಸ್ಪೆಕ್ಟರ್‌ ಅರುಣ್ ಮುರಗುಂಡಿ ತಂಡ ದಾಳಿ ನಡೆಸಿದೆ. ಕಾನ್ಸ್ ಟೆಬಲ್ ಜ್ಯೋತಿಯನ್ನ ವಶಕ್ಕೆ ಪಡೆದಿದ್ದಾರೆ. ದಾಳಿ ನಡೆಯುತ್ತಿದ್ದಂತೆ ಎಎಸ್‌ಐ ಸ್ಟೇಷನ್‌ನಿಂದ ಎಸ್ಕೇಪ್ ಆಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗಿದೆ.

Related Articles

Back to top button