Kannada NewsLatestNationalPolitics

*ಡಿ.ಕೆ.ಸುರೇಶ್ ಸೇರಿದಂತೆ ಲೋಕಸಭೆಯಿಂದ ಮತ್ತೆ ಮೂರು ಸಂಸದರು ಅಮಾನತು*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಸಂಸತ್ ಭದ್ರತಾ ಲೋಪ ಖಂಡಿಸಿ ವಿಪಕ್ಷ ಸಂಸದರು ಪ್ರತಿಭಟನೆ ನಡೆಸಿರುವ ಹಿನ್ನೆಲೆಯಲ್ಲಿ ಲೋಕಸಭೆಯಿಂದ ಸಂಸದರ ಅಮಾನತು ಪ್ರಕರಣ ಮುಂದುವರೆದಿದೆ.

ಸಂಸತ್ ಭದ್ರತಾ ಲೋಪ ಖಂಡಿಸಿ ಇದಕ್ಕೆ ಕೇಂದ್ರ ಗೃಹ ಸಚಿವರು ಉತ್ತರ ನೀಡುವಂತೆ ಆಗ್ರಹಿಸಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿಪಕ್ಷ ಸದಸ್ಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ನಿಯಮ ಮೀರಿ ವರ್ತನೆ ಆರೋಪದಲ್ಲಿ ಉಭಯ ಸದನಗಳಿಂದ ಈವರೆಗೆ 141 ಸಂಸದರನ್ನು ಅಮಾನತು ಮಾಡಲಾಗಿತ್ತು. ಇದೀಗ ಮತ್ತೆ ಮೂವರನ್ನು ಅಮಾನತು ಮಾಡಲಾಗಿದೆ.

ಇಂದು ನಡೆದ ಲೋಕಸಭಾ ಕಲಾಪದ ವೇಳೆ ಭದ್ರತಾ ಲೋಪ ಪ್ರಕರಣ ಮತ್ತೆ ಪ್ರತಿಧ್ವನಿಸಿದ್ದು, ಘಟನೆಯ ಬಗ್ಗೆ ಪ್ರಶ್ನಿಸಿ ಉತ್ತರಕ್ಕೆ ಆಗ್ರಹಿಸಿದ್ದಕ್ಕೆ ವಿಪಕ್ಷ ಸಂಸದರನ್ನು ಅಮಾನತು ಮಾಡಲಾಗುತ್ತಿರುವುದಕ್ಕೆ ವಿಪಕ್ಷಗಳ ಉಳಿದ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಲೋಕಸಭೆಯ ಮೂವರು ಸಂಸದರನ್ನು ಸಂಸತ್ ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button