Kannada NewsKarnataka NewsLatest

*ತೆರೆದಿಟ್ಟ ಸಂಪ್ ಗೆ ಬಿದ್ದು ಬಾಲಕಿ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತೆರೆದಿಟ್ಟ ನೀರಿನ ಸಂಪಗ್ ಬಿದ್ದು 5 ವರ್ಷದ ಬಾಲಕಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

5 ವರ್ಷದ ಶಾಹಿದಾ ಬಾನು ಮೃತ ಬಾಲಕಿ. ಬೆಂಗಳೂರಿನ ಟಿ.ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ಈ ದುರಂತ ಸಂಭವಿಸಿದೆ. ಆಟವಾಡುತ್ತಿದ್ದ ಬಾಲಕಿ ಆಕಸ್ಮಿಕವಾಗಿ ತೆರೆದಿಟ್ಟ ನೀರಿನ ಸಂಪ್ ಗೆ ಬಿದ್ದು ಮೃತಪಟಿದ್ದಾಳೆ.

ಮನೆಯ ಪಕ್ಕದ ಮನೆಯಲ್ಲಿದ್ದ ಬಿಹಾರ ಮೂಲದ ಹುಡುಗರು ಸಂಪ್ ತೆರೆದಿಟ್ಟಿದ್ದರು. ಇದನ್ನು ಗಮನಿಸದೇ ಬಾಲಕಿ ಸಂಪ್ ನಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ. ಘಟನೆ ಬಳಿಕ ಹುಡುಗರು ನಾಪತ್ತೆಯಾಗಿದ್ದಾರೆ.

ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Related Articles

Back to top button