Latest

ಡಿ.ರೂಪಾ ವಾರ್ನಿಂಗ್ ಗೆ ಬೆಚ್ಚಿದ ಖಾಸಗಿ ಆಸ್ಪತ್ರೆ: ರೋಗಿಗಳ ಹಣ ವಾಪಸ್

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಐಪಿಎಸ್ ಅಧಿಕಾರಿ ಡಿ.ರೂಪಾ ವಾರ್ನಿಂಗ್ ಗೆ ಬೆಚ್ಚಿದ ಖಾಸಗಿ ಆಸ್ಪತ್ರೆಯೊಂದು ಕೊರೋನಾ ರೋಗಿಗಳಿಂದ ಸುಲಿಗೆ ಮಾಡಿದ್ದ 24 ಲಕ್ಷ ರೂ.ಗಳನ್ನು ವಾಪಸ್ ಕಕ್ಕಿದೆ.

ಹರ್ಷ ಗುಪ್ತ

ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದು 22 ರೋಗಿಗಳಿಂದ ಲಕ್ಷ ಲಕ್ಷ ಹಣ ಸುಲಿಗೆ ಮಾಡಿತ್ತು. ಈ ಸಂಬಂಧ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರು ಡಿ.ರೂಪಾ ಮತ್ತು ಹರ್ಷ ಗುಪ್ತ ನೇತೃತ್ವದಲ್ಲಿ ತಂಡ ರಚಿಸಿತ್ತು. ಈ ತಂಡ ಖಾಸಗಿ ಆಸ್ಪತ್ರೆ ಮೇಲೆ ದಾಳಿ ನಡೆಸಿ, ರೋಗಿಗಳಿಂದ ಲಕ್ಷ ಲಕ್ಷ ರೂ. ಸುಲಿಗೆ ಮಾಡಿದ್ದನ್ನು ಪತ್ತೆ ಮಾಡಿತ್ತು.

ಸರಕಾರದ ನಿಯಮಾವಳಿಯಂತೆ ಕೊರೋನಾ ರೋಗಿಯಿಂದ ಆಸ್ಪತ್ರೆ ಹಣ ಪಡೆಯುವಂತಿಲ್ಲ. ಆದರೆ 22 ರೋಗಿಗಳಿಂದ 24 ಲಕ್ಷ ರೂ. ಪಡೆಯಲಾಗಿತ್ತು. ಕೆಲವರಿಂದ 1.50 ಲಕ್ಷ ರೂ. ವರೆಗೂ ಪಡೆಯಲಾಗಿತ್ತು.

ದಾಳಿ ನಡೆಸಿದ ರೂಪಾ ತಂಡ ತಕ್ಷಣ ಎಲ್ಲ ರೋಗಿಗಳಿಗೆ ಹಣ ವಾಪಸಾ ಮಾಡುವಂತೆ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಇಂದು ಎಲ್ಲ 24 ಲಕ್ಷ ರೂ.ಗಳನ್ನು ರೋಗಿಗಳಿಗೆ ನೆಫ್ಟ್ ಮೂಲಕ ಹಿತಿರುಗಿಸಿದೆ.

ಈ ರೀತಿ ದಾಳಿಗೊಳಗಾಗಿ ಹಣ ಹಿಂತಿರುವಗಿಸಿದ ಮೊದಲ ಖಾಸಗಿ ಆಸ್ಪತ್ರೆ ಇದಾಗಿದ್ದು, ಬೆಂಗಳೂರಿನಲ್ಲಿ ಮತ್ತು ರಾಜ್ಯದ ಇನ್ನೂ ಹಲವೆಡೆ ಅನೇಕ ಆಸ್ಪತ್ರೆಗಳು ಇದೇ ರೀತಿ ರೋಗಿಗಳಿಂದ ಹಣ ಸುಲಿದಿವೆ. ಅವುಗಳ ವಿರುದ್ಧವೂ ಕ್ರಮವಾಗಬೇಕಿದೆ.

ಡಿ.ರೂಪಾ ಮತ್ತು ಹರ್ಷ ಗುಪ್ತ ತಂಡದ ಕ್ರಮಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button