Election NewsKannada NewsKarnataka NewsLatestPolitics

*ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್*

ಪ್ರಗತಿವಾಹಿನಿ ಸುದ್ದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳಿಗೆ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಜಿಬಿಎ ಚುನಾವಣೆ ಸಂಬಂಧ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಂಗ್ರೇಶಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಸಭೆ ಬಳಿಕ ಮಾತನಾಡಿದ ಆಯುಕ್ತ ಸಂಗ್ರೇಶಿ, ಚುನಾವಣೆ ಸಂಬಂಧ ದಿನಾಂಕ ನಿಗದಿ ಮಾತ್ರ ಬಾಕಿ ಉಳಿದಿದೆ ಎಂದಿದ್ದಾರೆ.

ಎಲ್ಲಾ ಪ್ರಕ್ರಿಯೆ ಮುಗಿಸಿದ್ದೇವೆ. ಮಳೆಗಾಲ, ಶಾಲಾ ಕಾಲೇಜು, ಸೆನ್ಸಸ್ ಇವೆಲ್ಲಾ ಗಮನಿಸಿ ದಿನಾಂಕ ನಿಗದಿ ಆಗಬೇಕು. ಜೂನ್ 30ರ ಒಳಗಾಗಿ ಜಿಬಿಎ ಚುನಾವಣೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಹೀಗಾಗಿ ನಿಗದಿತ ಕಾಲಮಿತಿಯಲ್ಲಿ ಚುನಾವಣೆ ಮುಗಿಸಿ ಸುಪ್ರೀಂಕೋರ್ಟ್​​ಗೆ ನಾವು ವರದಿ ಕೊಡಬೇಕು ಎಂದರು.

Home add -Advt

ಜೂನ್ 14 ರಿಂದ ಜೂನ್ 24ರ ಒಳಗಾಗಿ ಒಂದು ಡೇಟ್ ಹೇಳಿ ಎಂದು ಸೂಚನೆ ಕೊಟ್ಟಿದ್ದೇನೆ. ಕೆಲವೇ ದಿನಗಳಲ್ಲಿ ಅಂತಿಮ ದಿನಾಂಕವನ್ನು ಎಲ್ಲರಿಗೂ ಹೇಳುತ್ತೇವೆ. ಸರ್ಕಾರ ಸಿಬ್ಬಂದಿ ಕೊರತೆ, ಹಣದ ಕೊರತೆ ಎಂದು ಕಾರಣ ಹೇಳುತ್ತಿದೆ. ಅದೇನೇ ಇದ್ದರೂ ಜೂನ್ 14 ರಿಂದ ಜೂನ್ 24ರ ಒಳಗಾಗಿ ದಿನಂಕ ಸೂಚಿಸಬೇಕು. ಚುನಾವಣೆ ಮುಂದೂಡಿಕೆ ಮಾಡುವ ಅಧಿಕಾರ ಸುಪ್ರೀಂಕೋರ್ಟ್​​ಗೆ ಮಾತ್ರ ಇರೋದು ಎಂದವರು ತಿಳಿಸಿದ್ದಾರೆ.

Related Articles

Back to top button