Latest

ಕಂಡವರ ಬೆಡ್ ರೂಮಲ್ಲಿ ಕ್ಯಾಮೆರಾ ಇಡುವ ಚಾಳಿ; ಸದಾನಂದಗೌಡ ಪ್ರಕರಣಕ್ಕೆ ಕಾಂಗ್ರೆಸ್ ವ್ಯಂಗ್ಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತಮ್ಮ ವಿರುದ್ಧದ ಯಾವುದೇ ವಿಡಿಯೋ, ವರದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ನಡೆಗೆ ವ್ಯಂಗ್ಯವಾಡಿರುವ ಕಾಂಗ್ರೆಸ್, ತಡೆಯಾಜ್ಞೆ ತರುವ ಮೂಲಕ ತಮ್ಮದೂ ಸಿಡಿ ಇದೆ ಎಂದು ಗೌಡರು ಸ್ವಯಂ ಒಪ್ಪಿಕೊಂಡಂತಾಗಿದೆ ಎಂದು ಹೇಳಿದೆ.

ಕಳ್ಳನ ಮನಸು ಹುಳ್ಳುಳ್ಳಗೆ ಎಂಬಂತೆ ಸದಾನಂದಗೌಡರು, ಸಿಡಿ ಬಿಡುಗಡೆಯಾಗದಂತೆ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತಂದ ಬಿಜೆಪಿಗರಲ್ಲಿ ಇವರು ಏಳನೆಯವರು. ಈ ಮೂಲಕ ತಮ್ಮದೂ ಸಿಡಿ ಇದೆ ಎಂದು ಗೌಡರು ಸ್ವಯಂ ಒಪ್ಪಿಕೊಂಡಂತಾಗಿದೆ. ಬಿಜೆಪಿಯವರಿಗೇ ಏಕೆ ಈ ಪರಿ ಸಿಡಿ ಭಯ ಕಾಡುವುದು ಎಂಬದೇ ಯಕ್ಷಪ್ರಶ್ನೆ ಎಂದು ಸರಣಿ ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ಕುಟುಕಿದೆ.

ತಮ್ಮವರಿಂದಲೇ ಬ್ಲ್ಯಾಕ್ ಮೇಲ್ ಜನತಾ ಪಾರ್ಟಿ ಎಂದು ಕರೆಸಿಕೊಂಡ ಬಿಜೆಪಿಯಲ್ಲಿ ಬ್ಲಾಕ್‌ಮೇಲ್ ಭರ್ಜರಿಯಾಗಿ ನಡೆಯುತ್ತಿರುವಂತಿದೆ. ಕಂಡವರ ಬೆಡ್ ರೂಮಲ್ಲಿ ಕ್ಯಾಮೆರಾ ಇಡುವ ಚಾಳಿ ಹೊಂದಿರುವ ರಾಜ್ಯ ಬಿಜೆಪಿ ನಾಯಕರು ಸದಾನಂದಗೌಡರನ್ನೂ ಬ್ಲಾಕ್‌ಮೇಲ್ ಮಾಡುತ್ತಿರುವಂತಿದೆ. ಒಟ್ಟಿನಲ್ಲಿ ಬಿಜೆಪಿಯಲ್ಲಿ ಸ್ವಚ್ಛ ಚಾರಿತ್ರ್ಯ ಹೊಂದಿದವರು ಒಬ್ಬರೂ ಇಲ್ಲ ಎಂದು ಲೇವಡಿ ಮಾಡಿದೆ.
ಕೇಂದ್ರ ಸಚಿವ ಸದಾನಂದ ಗೌಡರಿಗೂ ಸಿಡಿ ಆತಂಕ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button