ಪ್ರಗತಿವಾಹಿನಿ ಸುದ್ದಿ; ಭೋಪಾಲ್: ಡಾಬರ್ ಇಂಡಿಯಾ ಕಂಪನಿಯ ಫೆಮ್ ಫೇರ್ ನೆಸ್ ಜಾಹೀರಾತೊಂದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದ್ದು, ವಿವಾದದ ಬೆನ್ನಲ್ಲೇ ಕಂಪನಿ ಜಾಹೀರಾತನ್ನು ವಾಪಸ್ ಪಡೆದಿದೆ.
ಕರ್ವಾ ಚೌತ್ ಹಬ್ಬದ ಹಿನ್ನೆಲೆಯಿಟ್ಟುಕೊಂಡು ನಿರ್ಮಿಸಲಾಗಿದ್ದ ಈ ಜಾಹೀರಾತಿನಲ್ಲಿ ಸಲಿಂಗಿ ಜೋಡಿಗಳು ಇದ್ದುದೇ ಆಕ್ಷೇಪಕ್ಕೆ ಕಾರಣವಾಗಿತ್ತು. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಕೂಡ ತೀವ್ರವಾಗಿ ಟೀಕಿಸಿದ್ದರು. ಇದೊಂದು ಆಕ್ಷೇಪಾರ್ಹ ಸಂಗತಿಗಳನ್ನೊಗೊಂಡ ಜಾಹೀರಾತಾಗಿದ್ದು, ಕೂಡಲೇ ವಾಪಸ್ ಪಡೆಯಬೇಕು ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದರು. ಇಂದು ಮಹಿಳೆಯರಿಬ್ಬರು ಕರ್ವಾ ಚೌತ್ ಆಚರಿಸುತ್ತಿರುವುದನ್ನು ತೋರಿಸಿದ್ದಾರೆ, ನಾಳೆ ಪುರುಷರಿಬ್ಬರು ಮದುವೆಯಾಗುವುದನ್ನು ಜಾಹೀರಾತಿನಲ್ಲಿ ಅಳವಡಿಸುತ್ತಾರೆ. ಇಂಥ ಆಕ್ಷೇಪಣಾ ಜಾಹೀರಾತು ಬಿತ್ತರಿಸಲು ಅವಕಾಶವಿಲ್ಲ ಎಂದು ಕಿಡಿಕಾರಿದ್ದರು. ಇದರ ಬೆನ್ನಲ್ಲೇ ಡಾಬರ್ ಇಂಡಿಯಾ ಲಿಮಿಟೆಡ್ ಜಾಹೀರಾತು ವಾಪಸ್ ಪಡೆದಿದ್ದು, ಸಾಮಾಜಿಕ ಜಾಲತಾಣಗಳಿಂದಲೂ ಡಿಲಿಟ್ ಮಾಡಿದೆ.
ಕರ್ವಾ ಚೌತ್ ಹಬ್ಬದಲ್ಲಿ ಪತ್ನಿ ಪತಿಯ ಆರೋಗ್ಯ, ಆಯುಷ್ಯ ವೃದ್ಧಿಗಾಗಿ ವ್ರತವನ್ನು ಮಾಡಿ, ಜರಡಿಯನ್ನು ಚಂದ್ರನಿಗೆ ಹಿಡಿದು ಬಳಿಕ ಅದರಲ್ಲಿ ಪತ್ನಿ ಪತಿ ಮುಖವನ್ನು ನೋಡುವುದು ಪದ್ಧತಿ. ಆದರೆ ಕರ್ವಾ ಚೌತ್ ಕಲ್ಪನೆಯನ್ನಿಟ್ಟುಕೊಂಡು ಡಾಬರ್ ಇಂಡಿಯಾ ನಿರ್ಮಿಸಿದ್ದ ಜಾಹೀರಾತಿನಲ್ಲಿ ಯುವತಿಯರಿಬ್ಬರು ಫೆಮ್ ಫೇಸ್ ಬ್ಲೀಚ್ ಮಾಡಿಕೊಂಡು ವ್ರತಕ್ಕೆ ಸಿದ್ಧರಾಗುತ್ತಾರೆ. ಕೊನೆಯಲ್ಲಿ ಜರಡಿಯನ್ನು ಚಂದ್ರನಿಗೆ ಹಿಡಿದ ಬಳಿಕ ಅವರಿಬ್ಬರೂ ಪರಸ್ಪರ ಮುಖಕ್ಕೆ ಹಿಡಿದುಕೊಂಡಾಗಲೇ ಗೊತ್ತಾಗುತ್ತದೆ ಅವರಿಬ್ಬರೂ ಸಲಿಂಗಿ ಜೊಡಿ…ಪರಸ್ಪರ ಆರೋಗ್ಯ, ಆಯುಷ್ಯಕ್ಕಾಗಿ ವ್ರತ ಹಿಡಿದಿದ್ದರು ಎಂಬುದು.. ಈ ಜಾಹೀರಾತು ತೀವ್ರ ಆಕ್ರೋಶಕ್ಕೆ ಕಾರಣವಗಿತ್ತು.
ವಿವಾದದ ಬೆನ್ನಲ್ಲೇ ಇದೀಗ ಡಾಬರ್ ಇಂಡಿಯಾ ಜಾಹೀರಾತು ವಾಪಸ್ ಪಡೆದಿದೆ. ಯಾವುದೇ ಭಾವನೆಗಳಿಗೆ ನೋವುಂಟುಮಾಡುವ ಉದ್ದೇಶವಿರಲಿಲ್ಲ ಎಂದಿರುವ ಕಂಪನಿ, ಬೇಷರತ್ತಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿದೆ.
ಶಿರಸಿಯಲ್ಲಿ 5 ಕೋಟಿ ರೂ ಮೌಲ್ಯದ ತಿಮಿಂಗಲ ವಾಂತಿ ವಶ; ಬೆಳಗಾವಿಯ ವ್ಯಕ್ತಿ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ