Latest

RSS ಮುಖಂಡರಿಗೆ ಎಚ್ಚರಿಕೆ ನೀಡಿದ PFI

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ದೇಶಾದ್ಯಂತ ಪಿಎಫ್ ಐ ಸಂಘಟನೆ ನಿಶೇಧಿಸಿದ್ದರೂ ಕೂಡ ದಕ್ಷಿಣ ಕನ್ನಡ ಭಾಗದಲ್ಲಿ ಈ ಸಂಘಟನೆ ಸಕ್ರಿಯವಾಗಿದೆ. ಪಿಎಫ್ ಐ ಮುಖಂಡರು, ಕಾರ್ಯಕರ್ತರನ್ನು ಎನ್ ಐಎ ಅಧಿಕಾರಿಗಳು ಬಂಧಿಸಿದ್ದರೂ ಕೂಡ ಸುಮ್ಮನಾಗದ ಪಿಎಫ್ ಐ ಕೆಲ ಕಿಡಿಗೇಡಿಗಳು ರಸ್ತೆಗಳಲ್ಲಿ ಎಚ್ಚರಿಕೆ ಸಂದೇಶ ಬರೆಯುವ ಮೂಲಕ ಆರ್.ಎಸ್.ಎಸ್ ಗೆ ವಾರ್ನಿಂಗ್ ಕೊಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಿಲತಾಬೆಟ್ಟುವಿನ ಸ್ನೇಹಗಿರಿ ಎಂಬಲ್ಲಿ ರಸ್ತೆಯುದ್ದಕ್ಕೂ ಕಿಡಿಗೇಡಿಗಳು ಆರ್.ಎಸ್.ಎಸ್ ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

’ಚಡ್ಡಿಗಳೇ ಎಚ್ಚರ, ಪಿಎಫ್ ಐ ನಾವು ಮರಳಿ ಬರುತ್ತೇವೆ’ ಎಂದು ರಸ್ತೆಯ ಮೇಲೆ ಪಿಎಫ್ ಐ ಕಿಡಿಗೇಡಿಗಳು ಬರೆದಿದ್ದಾರೆ. ಸ್ಥಳೀಯರು ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ದೇಶಾದ್ಯಂತ ಪಿಎಫ್ ಐ ಹಾಗೂ ಅದರ ಅಂಗ ಸಂಸ್ಥೆಗಳು ಬ್ಯಾನ್ ಆಗಿದ್ದರೂ ಕೂಡ ದಕ್ಷಿಣ ಕನ್ನಡ, ಕರಾವಳಿ ಭಾಗದಲ್ಲಿ ಈ ಸಂಘಟನೆಯ ಕಾರ್ಯಕರ್ತರು ಆಕ್ಟೀವ್ ಆಗಿದ್ದು, ಇದೀಗ ಆರ್ ಎಸ್ ಎಸ್ ವಿರುದ್ಧ ದ್ವೇಷ ಸಾಧಿಸುವ ನಿಟ್ಟಿನಲ್ಲಿ ಇಂತಹ ಬೆದರಿಕೆಗಳನ್ನು ಒಡ್ಡುತ್ತಿದ್ದಾರೆ ಎನ್ನಲಾಗಿದೆ.

ಪ್ರಿಯಕರಕರನೊಂದಿಗೆ ಮಗಳು ಪರಾರಿ: ಅಪ್ಪ, ಅಮ್ಮ, ಸಹೋದರ ಆತ್ಮಹತ್ಯೆ

https://pragati.taskdun.com/latest/chikkaballapura3-peoplesuicideone-family/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button