Latest

KMF ಕ್ವಾಟ್ರರ್ಸ್ ನ ಬಹುಮಹಡಿ ಕಟ್ಟಡ ಕುಸಿತ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಟ್ಟಡ ಕುಸಿತ ಅವಘಡಗಳು ಹೆಚ್ಚುತ್ತಿದ್ದು, ಇದೀಗ ಕೆಎಂಎಫ್ ಕ್ವಾಟ್ರರ್ಸ್ ನಲ್ಲಿರುವ ಮೂರು ಅಂತಸ್ತಿನ ಕಟ್ಟದ ಕುಸಿದು ಬಿದ್ದಿರುವ ಘಟನೆ ನಡೆದಿದೆ.

ಬೆಂಗಳೂರಿನ ಡೇರಿ ಸರ್ಕಲ್ ಬಳಿಯ ಕೆಎಂಎಫ್ ಕ್ವಾಟ್ರರ್ಸ್ ನ ಒಳಗಡೆಗೆ ಇರುವ ಮೂರು ಅಂತಸ್ತಿನ ಕಟ್ಟಡ ಇದಾಗಿದ್ದು, ಸುಮಾರು 50 ವರ್ಷಗಳಷ್ಟು ಹಳೇ ಕಟ್ಟಡ ಎನ್ನಲಾಗಿದೆ. ಇಂದು ಬೆಳಿಗ್ಗೆ ಏಕಾಏಕಿ ಕಟ್ಟಡ ಕುಸಿದು ಬಿದ್ದಿದೆ.

ಸದ್ಯ ಕಟ್ಟಡದಲ್ಲಿ ಯಾರೂ ಇರಲಿಲ್ಲ. ಹಾಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ದೌಡಾಯಿಸಿದ್ದಾರೆ.
ಉಪಚುನಾವಣೆ ಮುಹೂರ್ತ ಫಿಕ್ಸ್

Related Articles

Back to top button