ಪ್ರಗತಿವಾಹಿನಿ ಸುದ್ದಿ, ಲ್ಹಾಸಾ: ಬಾಲಕನೊಬ್ಬನಿಗೆ ತಮ್ಮ ನಾಲಿಗೆ ಚೀಪಲು ಹೇಳಿದ ಟಿಬೆಟಿಯನ್ ಧರ್ಮಗುರು ದಲೈಲಾಮಾ ವಿಶ್ವಾದ್ಯಂತ ಟೀಕೆ ವ್ಯಕ್ತವಾಗುತ್ತಿದ್ದಂತೆ ಕ್ಷಮೆ ಯಾಚಿಸಿದ್ದಾರೆ.
ತಮ್ಮನ್ನು ಭೇಟಿಯಾಗುವ ಅನುಯಾಯಿಗಳನ್ನು ತಮಾಷೆ ಮಾಡುವ ಪ್ರವೃತ್ತಿ ಹೊಂದಿರುವ ದಲೈಲಾಮಾ ಈ ವಿಷಯದಲ್ಲಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಕನೊಬ್ಬ ದಲೈಲಾಮಾ ಅವರನ್ನು ಭೇಟಿಯಾಗಿ ಅವರನ್ನೊಮ್ಮೆ ಅಪ್ಪಿಕೊಳ್ಳಲು ಇಚ್ಛಿಸಿದ್ದಾನೆ. ಆದರೆ ದಲೈಲಾಮಾ ಅವರು ಆತನಿಗೆ ತಮ್ಮ ನಾಲಿಗೆ ಚಾಚಿ ಅದನ್ನು ಚೀಪುವಂತೆ ಸಾವಿರಾರು ಜನರ ಸಮ್ಮುಖದಲ್ಲೇ ತಿಳಿಸಿದ್ದರು.
ಈ ವಿಡಿಯೊದಲ್ಲಿ ಬಾಲಕನ ಬಾಯಿಗೆ ಬಾಯಿಟ್ಟು ಕಿಸ್ ನೀಡುವ ದೃಶ್ಯ ಎಲ್ಲೆಡೆ ಹರಿದಾಡಿ ಟೀಕೆಗೆ ಗುರಿಯಾಗುತ್ತಿದ್ದಂತೆ ದಲೈಲಾಮಾ ಅವರು ಬಾಲಕನ ಕುಟುಂಬ, ಪ್ರಪಂಚದಾದ್ಯಂತ ಇರುವ ಆತನ ಸ್ನೇಹಿತರಲ್ಲಿ ಕ್ಷಮೆ ಯಾಚಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ