Kannada NewsKarnataka NewsLatest

ಅಧಿಕಾರಿಗಳಿಗೆ ವಾಹನ ದೇಣಿಗೆ ನೀಡಿದ ಡಾಲ್ಮಿಯಾ : ಬಾಲಚಂದ್ರ ಜಾರಕಿಹೊಳಿಯಿಂದ ಹಸ್ತಾಂತರ

ಡಾಲ್ಮಿಯಾ  ಸಮಾಜಮುಖಿ ಕಾರ್ಯ ಶ್ಲಾಘನೀಯ  : ಶಾಸಕ ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ :   ಡಾಲ್ಮಿಯಾ ಸಿಮೆಂಟ್ ಕಾರ್ಖಾನೆ ಈ ಭಾಗದಲ್ಲಿ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ನೀಡುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮೂರು ಬೊಲೇರೋ ವಾಹನ ನೀಡಿರುವುದು ಸ್ತುತ್ಯಾರ್ಹವೆಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರದಂದು ಡಾಲ್ಮಿಯಾ ಭಾರತ ಸಿಮೆಂಟ್ ಲಿ., ಯಾದವಾಡ ಯುನಿಟ್‌ದಿಂದ ೩೦ ಲಕ್ಷ ರೂ. ವೆಚ್ಚದ ಮೂರು ಬೊಲೇರೋ ವಾಹನಗಳನ್ನು ಇಲಾಖೆಯ ಮುಖ್ಯಸ್ಥರಿಗೆ ವಿತರಿಸಿ ಮಾತನಾಡಿದ ಅವರು, ಯಾದವಾಡ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾರ್ಖಾನೆಯವರು ಕೈಗೊಳ್ಳುತ್ತಿರುವ ಸಮಾಜ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.
ಗೋಕಾಕ ಹಾಗೂ ಮೂಡಲಗಿ ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಹಾಗೂ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಡಾಲ್ಮಿಯಾ ಕಾರ್ಖಾನೆಯವರು ತಲಾ ೧೦ ಲಕ್ಷ ರೂ. ವೆಚ್ಚದ ಬೊಲೇರೋ ವಾಹನ ನೀಡಿದ್ದಾರೆ. ಇದರ ಜೊತೆಗೆ ಯಾದವಾಡದ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡಕ್ಕೆ ೩೦ ಲಕ್ಷ ರೂ.ಗಳ ದೇಣಿಗೆ ನೀಡಿದ್ದಾರೆ. ಅದಕ್ಕಾಗಿ ಕಾರ್ಖಾನೆಯವರನ್ನು ಬಾಲಚಂದ್ರ ಜಾರಕಿಹೊಳಿ ಅವರು ಅಭಿನಂದಿಸಿದರು.
ಗೋಕಾಕ ಟಿಎಚ್‌ಓ ಡಾ.ಮುತ್ತಣ್ಣ ಕೊಪ್ಪದ, ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭಾರತಿ ಕೋಣ ಹಾಗೂ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅವರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಡಾಲ್ಮಿಯಾ ಕಾರ್ಖಾನೆಯವರು ವಾಹನಗಳನ್ನು ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ಡಾಲ್ಮಿಯಾ ಕಾರ್ಖಾನೆಯ ಯಾದವಾಡ ಯುನಿಟ್ ಹೆಡ್ ಪ್ರಭಾತಕುಮಾರ ಸಿಂಗ್, ಜನರಲ್ ಮ್ಯಾನೇಜರ್(ಮೈನ್ಸ್) ಮುಖೇಶಕುಮಾರ ಸಿನ್ಹಾ ಅವರನ್ನು ಶಾಸಕರು ಸತ್ಕರಿಸಿದರು.
ಮೂಡಲಗಿ ತಹಶೀಲ್ದಾರ ಡಿ.ಜೆ. ಮಹಾತ, ಗೋಕಾಕ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟೀನ್, ಡಾ.ಆರ್.ಎಸ್. ಬೆಣಚಿನಮರಡಿ, ಮೂಡಲಗಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಮೂಡಲಗಿ ಪಿಎಸ್‌ಐ ಎಚ್.ವಾಯ್. ಬಾಲದಂಡಿ, ಮುಖಂಡರಾದ ರವೀಂದ್ರ ಸೋನವಾಲ್ಕರ, ರಾಮಣ್ಣಾ ಹಂದಿಗುಂದ, ವಿಜಯ ಸೋನವಾಲ್ಕರ, ಸಂತೋಷ ಸೋನವಾಲ್ಕರ, ಅನ್ವರ ನದಾಫ, ಡಾ.ಎಸ್.ಎಸ್. ಪಾಟೀಲ, ಮರೆಪ್ಪ ಮರೆಪ್ಪಗೋಳ, ರಮೇಶ ಸಣ್ಣಕ್ಕಿ, ಸುಭಾಸ ಸಣ್ಣಕ್ಕಿ, ಅಬ್ದುಲಗಫಾರ ಡಾಂಗೆ, ಶಿವು ಚಂಡಕಿ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಬಸು ಝಂಡೇಕುರುಬರ, ಪುರಸಭೆ ಸದಸ್ಯರು, ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನದಿ ತೀರದ ಗ್ರಾಮಗಳ ಸಂತ್ರಸ್ತರ ಅಹವಾಲು ಸ್ವೀಕರಿಸಿದ ಬಾಲಚಂದ್ರ ಜಾರಕಿಹೊಳಿ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನವ ಚಂಡಿಕಾ ಹೋಮ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button