
ಪ್ರಗತಿವಾಹಿನಿ ಸುದ್ದಿ; ದಾಂಡೇಲಿ: ವಿದ್ಯಾರ್ಥಿನಿಯರ ಗುಂಪೊಂದು ಸಾಮೂಹಿಕವಾಗಿ ತಮ್ಮ ಕೈಗಳನ್ನು ಕುಯ್ದುಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.
9 ಹಾಗೂ 10ನೇ ತರಗತಿ ಓದುವ 9 ವಿದ್ಯಾರ್ಥಿನಿಯರು ಹರಿತವಾದ ವಸ್ತುವಿನಿಂದ ತಮ್ಮ ಎಡಗೈ ತೋಳಿನ ಕೆಳಭಗದಲ್ಲಿ ಕುಯ್ದುಕೊಂಡು ಗಾಯಮಾದಿಕೊಂಡಿದ್ದಾರೆ. ವಿದ್ಯಾರ್ಥಿನಿಯರ ಕೈಗಳ ಮೇಲೆ 10-15 ಕುಯ್ದ ಗೆರೆಗಳು ಮೂಡಿವೆ.
ವಿದ್ಯಾರ್ಥಿನಿಯರ ಕೈಗಳನ್ನು ನೋಡಿದ ಪೋಷಕರು ಆತಂಕಗೊಂಡಿದ್ದು, ಪೊಲೀಸರ ಗಮನಕ್ಕೆ ತಂದಿದ್ದಾರೆ. ಅಲ್ಲದೇ ಶಾಲಾ ಶಿಕ್ಷಕರಿಗೂ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿನಿಯರನ್ನು ವಿಚಾರಿಸಿದರೆ ಒಬ್ಬೊಬ್ಬರು ಒಂದೊಂದು ಕಾರಣವನ್ನು ನೀಡುತ್ತಿದ್ದಾರೆ. ಮುಖ್ಯೋಪಾಧ್ಯಾಯರಿಗೂ ವಿದ್ಯಾರ್ಥಿನಿಯರು ಸರಿಯಾಗಿ ಉತ್ತರಿಸುತ್ತಿಲ್ಲ ಎನ್ನಲಾಗಿದೆ.
ವಿಚಿತ್ರ ಬೆಳವಣಿಗೆಯಿಂದ ಪೋಷಕರು ಕಂಗಾಲಾಗಿದ್ದು, ಘಟನೆಗೆ ಕಾರಣವೇನು ಎಂಬುದು ಬೆಳಕಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ. ವಿದ್ಯಾರ್ಥಿನಿಯರು ಸಾಮೂಹಿಕವಾಗಿ ಆತ್ಮಹತ್ಯೆಗೆ ಯತ್ನ ನಡೆಸಿದ್ದರೇ ಎಂಬ ಶಂಕೆ ವ್ಯಕ್ತವಾಗಿದೆ. ತನಿಖೆ ನಂತರೇ ಘಟನೆಗೆ ಪ್ರಮುಖ ಕಾರಣ ತಿಳಿಯಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ