
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಆಂಜನೇಯನಗರದ ಶ್ರೀ ಗಣಪತಿ ದೇವಸ್ಥಾನದಲ್ಲಿ, ಕೊರೋನಾ ವೈರಸ್ ಮುಕ್ತಿಗಾಗಿ 48 ಘಂಟೆ ಸತತವಾಗಿ ಶ್ರೀ ದನ್ವಂತರಿ ಜಪ ಮತ್ತು ಹೋಮ ಏರ್ಪಡಿಸಲಾಗಿತ್ತು.
3 ದಿನಗಳ ಕಾರ್ಯಕ್ರಮ ಭಾನುವಾರ ಮುಕ್ತಾಯವಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಸಿಪಿ ನಾರಾಯಣ ಬರಮನಿ ಆಗಮಿಸಿದ್ದರು.
ಮಹಾಂತೇಶ ರಣಗಟ್ಟಿಮಠ, ಸೋಮಶೇಖರ್ ಹಿರೇಮಠ, ಮುರಗೇಂದ್ರ ಶಾಸ್ತ್ರೀ ಚರಲಿಂಗಮಠ , ರವಿ ಶಾಸ್ತ್ರೀ ಹಿರೇಮಠ, ನಾಗಯ್ಯ ಕಲ್ಮಠ, ದುರದುಂಡಿ ಶಾಸ್ತ್ರೀ, ಸಂಗಯ್ಯ ಶಾಸ್ತ್ರೀ, ರುದ್ರಯ್ಯ ಶಾಸ್ತ್ರೀ, ಆನಂದ ಶಾಸ್ತ್ರೀ, ಸುಪ್ರೀತ್ ಶಾಸ್ತ್ರೀ, ಉಮಾಪತಿ ಶಾಸ್ತ್ರೀ, ಶಿವಯೋಗಿ ಶಾಸ್ತ್ರೀ, ಪ್ರಭು ಶಾಸ್ತ್ರೀ, ಶಶಿಕಾಂತ್ ಲದ್ದಿಮಠ ಇನ್ನಿತರರು ಕಾರ್ಯಕ್ರಮದ ನೇತೃತ್ವವಹಿಸಿ ಉಪಸ್ಥಿತರಿದ್ದರು.