Belagavi NewsBelgaum NewsKarnataka NewsLatestPolitics

*ರಾಜ್ಯದಲ್ಲಿ ಸಹಕಾರ ಕ್ಷೇತ್ರ ಬಲಿಷ್ಠವಾಗಿ ಬೆಳೆದಿದೆ: ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಸಹಕಾರಿ ಕ್ಷೇತ್ರ ಅತ್ಯಂತ ಬಲಿಷ್ಟವಾಗಿ ಬೆಳೆದಿದ್ದು, ರೈತರಿಗೆ ಅನುಕೂಲಕರವಾಗುವ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.


ಸೋಮವಾರ ದಾಸ್ತಿಕೊಪ್ಪ ಗ್ರಾಮದ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 101ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ರಾಜ್ಯದಲ್ಲಿ ಅನೇಕ ಮಹನೀಯರು ಸಹಕಾರ ಕ್ಷೇತ್ರವನ್ನು ಬೆಳೆಸಿದ್ದಾರೆ. ಹಿರಿಯರ ಆಶಯದಂತೆ ಬೆಳೆಸಿಕೊಂಡು ಹೋಗಬೇಕು. ವೈಯಕ್ತಿಕ ದ್ವೇಷಗಳನ್ನು ಬದಿಗಿಟ್ಟು ಸಹಕಾರ ತತ್ವದಡಿ ಕೆಲಸ ಮಾಡಿದರೆ ಜನರಿಗೆ ಬಹಳಷ್ಟು ಅನುಕೂಲ ಮಾಡಿಕೊಡಬಹುದು ಎಂದು ಅವರು ಹೇಳಿದರು.

ಸಹಕಾರಿ ಬ್ಯಾಂಕ್‌ಗಳಲ್ಲಿ ನಿಯಮಗಳನ್ನು ಸಡಿಲಿಸಿ ಸಾಲ ನೀಡಲಾಗುತ್ತಿದೆ. ಇದರಿಂದಾಗಿ ಜನರಿಗೆ ಅನುಕೂಲವಾಗುತ್ತದೆ. ಸಣ್ಣ ಸಣ್ಣ ಉದ್ಯಮ ಬೆಳೆಸಲು ಸಾಧ್ಯವಾಗುತ್ತದೆ. ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಜನರ, ರೈತರ ಸೇವೆ ಮಾಡುವ ಉದ್ಧೇಶದಿಂದ ಸಹಕಾರ ಕ್ಷೇತ್ರಕ್ಕೆ ನಾನು ಪ್ರವೇಶ ಮಾಡಿದ್ದೇನೆ ಎಂದರು.

Home add -Advt

ಕಾರ್ಯಕ್ರಮದಲ್ಲಿ ಶ್ರೀ ಷ.ಬ್ರ ಡಾ. ಪಾಲಾಕ್ಷ ಶಿವಯೋಗಿಶ್ವರರರು, ವೇದಮೂರ್ತಿಗಳಾದ ಶ್ರೀ ರಾಚಯ್ಯ ಹಿರೇಮಠ್, ಶ್ರೀ ಬಸವರಾಜ ಸ್ವಾಮಿಗಳು, ಶ್ರೀ ಜನಕರಾಜ ಸ್ವಾಮಿಗಳು, ಶಿವನಗೌಡ ಪಾಟೀಲ, ಬಾಬಾಸಾಹೇಬ್ ದೇ ಪಾಟೀಲ, ನಾನಾಸಾಹೇಬ್ ಪಾಟೀಲ, ಎನ್.ಜಿ.ಕಲಾವಂತ, ಚಂದ್ರಗೌಡ ಪಾಟೀಲ,ವಿ‌.ಬಿ.ಗಿರನವರ, ಎನ್.ವಾಯ್.ಭಜಂತ್ರಿ ಮುಂತಾದವರು ಉಪಸ್ಥಿತರಿದ್ದರು.

Related Articles

Back to top button