ಪ್ರಗತಿ ವಾಹಿನಿ ಸುದ್ದಿ; ನವದೆಹಲಿ: ಭಾರತೀಯರು ಪ್ರತಿ ತಿಂಗಳು ಸರಾಸರಿ 14 ಜಿಬಿ ಡಾಟಾ ಬಳಕೆ ಮಾಡುತ್ತಾರೆ. ಮೊದಲು ಈ ಪ್ರಮಾಣದ ಡಾಟಾ ಬಳಕೆಗೆ 4500 ರೂ. ಆಗುತ್ತಿತ್ತು. ಈಗ 125-150 ರೂ. ಗೆ ಇಷ್ಟು ಡಾಟಾ ಸಿಗುತ್ತಿದೆ. ಈ ಲೆಕ್ಕಾಚಾರವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.
5 ಜಿ ತಂತ್ರಜ್ಞಾನವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ದೇಶದಲ್ಲಿ ಮೊದಲು 1 ಜಿಬಿ ಡಾಟಾದ ದರ 300 ರೂ. ಆಗಿತ್ತು. ಈಗ 1 ಜಿಬಿ ಡಾಟಾ ಸರಾಸರಿ 10 ರೂ. ಗೆ ಲಭ್ಯವಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ಡಾಟಾ ಲಭ್ಯವಾಗಿತ್ತಿರುವುದರಿಂದ ತಂತ್ರಜ್ಞಾನದ ಲಾಭ ಎಲ್ಲ ವರ್ಗದ ಜನರಿಗೂ ಸಿಗಲು ಸಾಧ್ಯವಾಗುತ್ತಿದೆ ಎಂದಿದ್ದಾರೆ.
ಖ್ಯಾತ ಟಿವಿ ನಟಿಗೆ ಕಿಡ್ನಿ ವೈಫಲ್ಯ: ಆರೋಗ್ಯ ಸ್ಥಿತಿ ಗಂಭೀರ
https://pragati.taskdun.com/latest/tv-actressanayasuffers-kidney-failure/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ