Kannada NewsKarnataka News

ಪಾರವಾಡೇಶ್ವರ ಮಠದಲ್ಲಿ ಬುಧವಾರ ದತ್ತ ಜಯಂತಿ ಸಂಪನ್ನ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲ್ಲೂಕಿನ ಜಾಂಬೋಟಿ ಹೋಬಳಿಯ ಪಾರವಾಡ ಗ್ರಾಮದಲ್ಲಿರುವ ಶ್ರೀ ಪಾರವಾಡೇಶ್ವರ ಮಠದಲ್ಲಿ ಬುಧವಾರ ದತ್ತ ಜಯಂತಿ ಉತ್ಸವ ಜರುಗಿತು. ಕಾರ್ಯಕ್ರಮವನ್ನು ಬೆಳಗಾವಿ ಮಹಾನಗರ ಪಾಲಿಕೆಯ ಹಿರಿಯ ಕಂದಾಯ ಅಧಿಕಾರಿ ರವಿ ದೊಡಗೌಡರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಧರ್ಮ ರಕ್ಷಣೆ, ಧರ್ಮ ಪಾಲನೆ ಮತ್ತು ಭಕ್ತರನ್ನು
ಸನ್ಮಾರ್ಗದಲ್ಲಿ ಕೊಂಡೊಯ್ಯುವ ಕೆಲಸಗಳು ಮಠಮಾನ್ಯಗಳಿಂದ ನಡೆಯುತ್ತಿವೆ ಎಂದು
ಅಭಿಪ್ರಾಯ ಪಟ್ಟರು.
ಜಯಂತಿ ಉತ್ಸವದ ಸಾನಿಧ್ಯವನ್ನು ವಹಿಸಿದ್ದ ಮಠದ ಪೀಠಾಧಿಪತಿ ಸದ್ಗುರು ಭಾವು ಮಹಾರಾಜರು ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿ, ಗುರುವಿನ ಮಾರ್ಗದರ್ಶನದಲ್ಲಿ
ಭಕ್ತಿಮಾರ್ಗದಿಂದ ಸಾಗಿದರೆ ಮೋಕ್ಷ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಗೋವಾ ರಾಜ್ಯದ ತಜ್ಞ ವೈದ್ಯೆ ಡಾ.ಕವಿತಾ ಕೋಲವಾಡಕರ, ಬೆಳಗಾವಿ ಜಿಲ್ಲಾ ಪಂಚಾಯ್ತಿಯ ಹಿಂದಿನ ಒಂಬಡ್ಸಮನ್ ಎ.ಜೆ ಧುಮಾಳೆ, ಜಾಂಬೋಟಿ ಕ್ಷೇತ್ರದ ಜಿ.ಪಂ ಸದಸ್ಯ ಜಯರಾಮ್ ದೇಸಾಯಿ, ಮಠದ ಪದಾಧಿಕಾರಿ ಯುವರಾಜ ಸೋಹಂ ರಾಜೇ, ಸ್ಥಳೀಯರಾದ ದತ್ತಾರಾಮ ಗಾವಡೆ, ಸಂಜೀವ ಮಿರಾಶಿ ಸೇರಿದಂತೆ ಪಾರವಾಡ, ಕಣಕುಂಬಿ ಸುತ್ತಮುತ್ತಲಿನ ಮಠದ ಭಕ್ತರು ಭಾಗವಹಿಸಿದ್ದರು.
ಕಾರ್ಯಕ್ರಮದ ನಂತರ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಮಠದ ಆವರಣದಲ್ಲಿ ಧರ್ಮ ಧ್ವಜಾರೋಹಣ, ಪ್ರಾರ್ಥನೆ, ಉಪನ್ಯಾಸ,
ಕೀರ್ತನೆ, ತೊಟ್ಟಿಲು ಸೇವೆ ಮತ್ತು ಇತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿ ಸಂಜೆ
ಭಕ್ತರಿಗೆ ಉಪನ್ಯಾಸ ಮತ್ತು ಸಂಗೀತ ಕಾರ್ಯಕ್ರಮಗಳು ನಡೆದವು. ಪ್ರಭಾಕರ ಕುಲಕರ್ಣಿ
ಕಾರ್ಯಕ್ರಮ ನಿರ್ವಹಿಸಿದರು. ಪ್ರವೀಣ ಪಾಟೀಲ ಸ್ವಾಗತಿಸಿದರು. ಕೀರ್ತಿಕುಮಾರ
ಕುಲಕರ್ಣಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button