*ಶ್ರೀ ದತ್ತ ಜಯಂತಿಯ ಉತ್ಸವದಲ್ಲಿ ಪಾಲ್ಗೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಶಿಂದೋಳ್ಳಿ ಗ್ರಾಮದ ಕೆ.ಎಸ್.ಆರ್.ಟಿ.ಸಿ ಕಾಲೋನಿಯ ಶ್ರೀ ದತ್ತ ಜಯಂತಿ ಉತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಗುರು ಚರಿತ್ರೆ ಪಾರಾಯಣ ಸಪ್ತಾಹ ಹಾಗೂ ಶ್ರೀ ದತ್ತ ಜಯಂತಿಯ ಉತ್ಸವದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಪಾಲ್ಗೊಂಡರು.
ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಮಹಾಪ್ರಸಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ವರ್ಷದೊಳಗೆ ದತ್ತ ಮಂದಿರ ಕಟ್ಟಡ ನಿರ್ಮಾಣ ಮಾಡಿಕೊಡಲಾಗುವುದು ಎಂದರು.

ನನಗೆ ಒಳಗೊಂದು, ಹೊರಗೊಂದು ಗೊತ್ತಿಲ್ಲ. ಎಲ್ಲರೂ ನನಗೆ ಸಮಾನ, ಚುನಾವಣೆ ಮುಗಿದ ಮೇಲೆ ಎಲ್ಲರೂ ನಮ್ಮವರೇ ಎಂದರು.
ಏಳೂವರೆ ವರ್ಷದಲ್ಲಿ 150 ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿದ್ದು, ಅಧಿಕಾರ ಇದ್ದಾಗ ಕೆಲಸ ಮಾಡಬೇಕು, ಮಾಡುತ್ತಿದ್ದೇನೆ. ಶಿಂಧೋಳಿ ಜಾತ್ರೆ ಸಂದರ್ಭದಲ್ಲಿ 7 ಕೋಟಿ ರೂ.ಗಳ ಕೆಲಸ ಮಾಡಿಸಿದ್ದೇನೆ. ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಅದು ನಿಲ್ಲಬಾರದು, ಅಭಿವೃದ್ಧಿ ವಿಚಾರದಲ್ಲಿ ಹೆಸರು ಮಾಡುವ ಆಸೆ ನನಗಿದೆ. ಅಭಿವೃದ್ಧಿ ಮಾಡೇ ಮಾಡುತ್ತೇನೆ ಎನ್ನುವುದು ನನ್ನ ಹಠ. ನಿಮ್ಮೆಲ್ಲರ ಸಹಕಾರ, ಆಶೀರ್ವಾದ ಇರಲಿ ಎಂದು ಹೇಳಿದರು.

ಈ ವೇಳೆ ರಾಜು ಪಾಟೀಲ, ಸುರೇಶ ಪಾಟೀಲ, ರಾಕೇಶ್ ಪಾಟೀಲ, ಸತೀಶ ನಾಡಗೌಡ, ಶಿವು ಸೈಬಣ್ಣವರ, ನಾಗೇಶ್ ದೇಸಾಯಿ, ಮಲ್ಲಪ್ಪ ಶಹಾಪೂರಕರ, ಶೀಲಾ ತಿಪ್ಪಣ್ಣಗೋಳ, ಭಾರತಿ ಖಾನಾಪುರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀದೇವಿ ಹಿರೇಮಠ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.




