Kannada NewsKarnataka News

ಚಿಕ್ಕಮ್ಮನನ್ನೆ ಕೊಲ್ಲಲು ಮುಂದಾಗಿ ಜೈಲು ಸೇರಿದ ದಂಪತಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಹಣಕ್ಕಾಗಿ ಚಿಕ್ಕಮ್ಮನನ್ನೆ ಕೊಲ್ಲಲು ಮುಂದಾದ ಮಗಳು ಮತ್ತು ಅಳಿಯ ಈಗ ಜೈಲು ಪಾಲಾಗಿರುವ ಘಟನೆ ಬೆಂಗಳೂರಿನ ಆರ್.ಎಂ.ಸಿ‌.ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.‌ ಆಸ್ತಿ, ಚಿನ್ನ, ಹಣದ ಮುಂದೆ ಯಾವ ಸಂಬಂಧಕ್ಕೂ ಬೆಲೆ ಇಲ್ಲ ಅನ್ನೋದಕ್ಕೆ ಈ ಘಟನೆ ಸಾಕ್ಷಿ ಆಗಿದೆ.‌

ಹೌದು.‌ ಈ ಸ್ಟೋರಿ ಓದಿದ್ರೆ ನಾವು ನಾಗರಿಕ ಸಮಾಜದಲ್ಲಿದ್ದೀವಾ ಎನ್ನುವ ಅನುಮಾನ ಸಹಜವಾಗಿ ಕಾಡುತ್ತದೆ.‌ ಬೆಂಗಳೂರಿನ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾರ್ಕೆಟ್ ಬಳಿ ಚಿಕ್ಕಮ್ಮನನ್ನು ಕರೆಸಿಕೊಂಡ ಸುಮಿತ್ರಾ ಮತ್ತು ಆಕೆಯ ಗಂಡ ಚಿಕ್ಕಮ್ಮಳ ಕೊಲೆಗೆ ಯತ್ನಿಸಿ, ಚಿನ್ನ, ಹಣ ತೆಗೆದುಕೊಂಡು ಚಿಕ್ಕಮ್ಮ ಸತ್ತಿದ್ದಾಳೆಂದು ತಿಳಿದು ಧರ್ಮಸ್ಥಳಕ್ಕೆ ಎಸ್ಕೇಪ್ ಆಗಿದ್ದಾರೆ. ಆದರೆ ಅಸಹಾಯಕ ಸ್ಥಿತಿಯಲ್ಲಿ ಬಿದ್ದಿದ್ದ ಚಿಕ್ಕಮ್ಮ ಅಣ್ಣಮ್ಮಳನ್ನು ನೋಡಿದ ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದಾರೆ.

Home add -Advt

ಮತ್ತೆ ಬೆಂಗಳೂರಿಗೆ ಬಂದಿದ್ದ ಆರೋಪಿಗಳು, ಚಿಕ್ಕಮ್ಮ ಅಣ್ಣಮ್ಮ ಬದುಕಿರುವ ವಿಚಾರ ತಿಳಿದು ಮತ್ತೆ ಹಾಸನ, ಸಕೇಲಶಪುರದ ಕಡೆಗೆ ಸುತ್ತಾಟ ಮಾಡಿದ್ದಾರೆ.‌ ಸದ್ಯ ಈಗ ರಾಕ್ಷಸ ದಂಪತಿ ಪೊಲೀಸರ ಅತಿಥಿಗಳಾಗಿದ್ದಾರೆ.

Related Articles

Back to top button