Kannada NewsKarnataka NewsLatest

*ಅಮೆರಿಕಾದಲ್ಲಿ ದಾವಣಗೆರೆ ಮೂಲದ ಒಂದೇ ಕುಟುಂಬದ ಮೂವರು ನಿಗೂಢ ಸಾವು*

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ದೂರದ ಅಮೆರಿಕಾದಲ್ಲಿ ವಾಸವಾಗಿದ್ದ ದಾವಣಗೆರೆ ಮೂಲದ ದಂಪತಿ ಹಾಗೂ ಮಗು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

Home add -Advt

ಯೋಗೇಶ್ ಹೊನ್ನಾಳ (37), ಪ್ರತಿಭಾ (35) ಹಾಗೂ ಮಗು ಯಶ್ (6) ಮೃತರು. ಕಳೆದ 9 ವರ್ಷಗಳಿಂದ ಅಮೆರಿಕಾದಲ್ಲಿ ವಸವಾಗಿದ್ದ ದಂಪತಿ ಇದೀಗ ಏಕಾಏಕಿ ಸಾವನ್ನಪ್ಪಿರುವ ಸುದ್ದಿ ಕುಟುಂಬಕ್ಕೆ ಆಘಾತ ತಂದಿದೆ.

ದಾವಣಗೆರೆ ಮೂಲದ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದವರಾದ ಯೋಗೇಶ್ ದಂಪತಿ ಅಮೆರಿಕಾದ ಮೇರಿಲ್ಯಾಂಡ್ ನ ಬಾಲ್ಟಿಮೋರ್ ನಲ್ಲಿ ವಾಸವಾಗಿದ್ದರು. ಯೋಗೇಶ್ ಹಾಗೂ ಪತ್ನಿ ಪ್ರತಿಭಾ ಇಂಜಿನಿಯರ್ ವೃತ್ತಿಯಲ್ಲಿದ್ದರು. ಇದೀಗ ಪತಿ-ಪತ್ನಿ ಹಾಗೂ ಮಗು ಮೂವರು ಸವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮೂವರ ನಿಗೂಢ ಸಾವಿನ ಬಗ್ಗೆ ಅನುಮಾನ ಮೂಡಿತ್ತಿದೆ. ತನಿಖೆ ನಡೆಸಿ ಮೃತದೇಹವನ್ನು ಹುಟ್ಟೂರಿಗೆ ತರುವ ವ್ಯವಸ್ಥೆ ಮಾಡಿಸುವಂತೆ ದಾವಣಗೆರೆಯಲ್ಲಿರುವ ಯೋಗೇಶ್ ಹಾಗೂ ಪ್ರತಿಭಾ ಕುಟುಂಬ ಸರ್ಕಾರಕ್ಕೆ ಮನವಿ ಮಾಡಿವೆ.


Related Articles

Back to top button