
ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಆರೋಪಿ ಆಟೋ ಚಾಲಕ ಜೈಲಿನ ಗೋಡೆ ಜಿಗಿದು ತಪ್ಪಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಆಟೋ ಚಾಲಕ ವಸಂತ್, ದಾವಣಗೆರೆಯ ಉಪಕಾರಾಗ್ರಹ ಸೇರಿದ್ದ. ಜೈಲು ಪಾಲಾದ ಎರಡೇ ದಿನಕ್ಕೆ ಜೈಲಿನ ಗೋಡೆ ಜಿಗಿದು ತಪ್ಪಿಸಿಕೊಂಡು ಪರಾರಿಯಾಗಿದ್ದ. ಜೈಲಿನ ಗೋಡೆ ಮೇಲಿಂದ ಜಿಗಿದು ಓಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಇದೀಗ ಆರೋಪಿ ವಸಂತ್ ನನ್ನು ದಾವಣಗೆರೆ ಪೊಲೀಸರು ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ದಗ್ಗಾವತಿ ಬಳಿ ಬಂಧಿಸಿದ್ದಾರೆ. ಆರೋಪಿ ದಗ್ಗಾವತಿಯ ಸಂಬಂಧಿಕರ ಮನೆಯಲ್ಲಿ ಅಡಗಿ ಕುಳಿತಿದ್ದ ಎನ್ನಲಾಗಿದೆ. ಕಾನ್ಸ್ ಟೇಬಲ್ ನಿಜಲಿಂಗಪ್ಪ ಖಚಿತ ಮಾಹಿತಿ ಆದರಿಸಿ ಆರೋಪಿಯನ್ನು ಬಂಧಿಸಿ, ಮತ್ತೆ ಜೈಲಿಗೆ ಕಳುಹಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ