Latest

ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಸಾಮ್ನಾದಲ್ಲಿ ಸಂಪಾದಕೀಯ ಬರೆದು ಕಿಡಿಕಾರಿದ ಶಿವಸೇನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮುಂಬೈ ನಮ್ಮದು, ಮುಂಬೈ ಮೇಲೆ ನಮಗೂ ಹಕ್ಕಿದೆ ಎಂದು ಹೇಳಿದ್ದ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಬರೆಯಲಾಗಿದೆ.

ನಮಗೆ ಕರ್ನಾಟಕದ ಒಂದಿಂಚೂ ಜಾಗ ಬೇಡ. ಆದರೆ ಮಹಾಜನ ವರದಿಯಂತೆ ಮಹಾರಾಷ್ಟ್ರಕ್ಕೆ ಕರ್ನಾಟಕದಿಂದ ಬರಬೇಕಾದ ಜಾಗ ನೀಡಲಿ. ಬೆಳಗಾವಿ ಸೇರಿದಂತೆ ಕರ್ನಟಕ ಅತಿಕ್ರಮಣ ಮಾಡಿಕೊಂಡ ಭೂ ಭಾಗ ಮಹಾರಾಷ್ಟ್ರಕ್ಕೆ ಬರಬೇಕು. ಗಡಿ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿರುವಾಗ ಮರಾಠಿಗರು ಹಾಗೂ ಮರಾಠಿ ಸಂಸ್ಕೃತಿ ಮೇಲೆ ಕರ್ನಾಟಕ ಅನ್ಯಾಯವೆಸಗುತ್ತಿದೆ ಎಂದು ಹೇಳಲಾಗಿದೆ.

ಮುಂಬೈನಲ್ಲಿ ಹಲವರು ಕನ್ನಡಿಗರಿದ್ದಾರೆ. ಅದಕ್ಕಾಗಿ ಡಿಸಿಎಂ ಲಕ್ಷ್ಮಣ ಸವದಿ ಮುಂಬೈ ಬಿಟ್ಟುಕೊಡಿ ಎಂದು ಹುಚ್ಚು ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರಕ್ಕಾಗಿ ಮಡಿದ ಹುತಾತ್ಮರಿಗೆ ಅವರು ಅವಮಾನ ಮಾಡಿದ್ದಾರೆ. ಅರ್ನಾಬ್ ಗೋಸ್ವಾಮಿ, ಕಂಗನಾ ರಾಣವತ್ ಅವರಿಗೆ ಸುಪ್ರೀಂ ಕೋರ್ತ್ ನಲ್ಲಿ ಬೇಗನೇ ನ್ಯಾಯ ಸಿಗುತ್ತದೆ. ಆದರೆ ಗಡಿ ಭಾಗದ ಮರಾಠಿ ಭಾಷಿಕರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಹೇಳಲಾಗಿದೆ.

Home add -Advt

Related Articles

Back to top button