*ಅದು ಬೆಳಗಾವಿಯಲ್ಲಿದ್ದಾಗಿನ ಹಳೇ ವಿಡಿಯೋ…ರಾಸಲೀಲೆ ಪ್ರಕರಣದ ಬಗ್ಗೆ ಬಾಯ್ಬಿಟ್ಟ ಪೊಲೀಸ್ ಅಧಿಕಾರಿ*

ಪ್ರಗತಿವಾಹಿನಿ ಸುದ್ದಿ: ಡಿಜಿಪಿ ರಾಮಚಂದ್ರ ರಾವ್, ಕರ್ತವ್ಯದಲ್ಲಿದ್ದಾಗಲೇ ಕಚೇರಿಯಲ್ಲಿ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದ್ದು, ಪ್ರಕರಣದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ರಾಮಚಂದ್ರ ರಾವ್ ಕಚೇರಿಯಲ್ಲಿ ಸಮವಸ್ತ್ರದಲ್ಲಿದ್ದಾಗಲೇ ಮಹಿಳೆಯರೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ ಹಸಿಬಿಸಿ ವಿಡಿಯೋ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಗೃಹ ಸಚಿವ ಪರಮೇಶ್ವರ್ ಭೇಟಿಗೆ ಆಗಮಿಸಿದ ಅವರನ್ನು ಗೃಹ ಸಚಿವರು ಭೇಟಿಗೆ ಒಪ್ಪಿಲ್ಲ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಚಂದ್ರ ರಾವ್, ವಿಡಿಯೋ ಬಗ್ಗೆ ಸಮಜಾಯಿಷಿ ನೀಡಿದ್ದಾರೆ.
ಅದು ಈಗಿನ ವಿಡಿಯೋ ಅಲ್ಲ. 8 ವರ್ಷದ ಹಳೇ ವಿಡಿಯೋ. ಆಗ ನಾನು ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದೆ. ಯಾರೋ ಷಡ್ಯಂತ್ರ ನಡೆಸಿ ಈಗ ವಿಡಿಯೋ ವೈರಲ್ ಮಾಡಿದ್ದಾರೆ ಎಂದಿದ್ದಾರೆ.
ಇದೆಲ್ಲ ಸುಳ್ಳು ವಿಡಿಯೋ. ನನ್ನ ವಿರುದ್ಧ ಆರೋಪ ಮಾಡಲು ಇಂತಹ ವಿದಿಯೋ ಬಿಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ರಾಮಚಂದ್ರ ರಾವ್ ಪ್ರಸ್ತುತ ಡಿಸಿಆರ್ ಇ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಡಿಜಿಪಿ ಆಗಿದ್ದಾಗ ಕರ್ತವ್ಯದ ವೇಳೆ ಕಚೇರಿಯಲ್ಲಿಯೇ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.




