ಮತದಾನದ ಖುಷಿಯಲ್ಲಿದ್ದವರಿಗೆ ಬೆನ್ನಟ್ಟಿದ ಮೃತ್ಯು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆ ಅಲ್ಲಲ್ಲಿ ಕೆಲ ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ಬಹುತೇಕ ಶಾಂತಿಯುತವಾಗಿದೆ.

ಆದರೆ ಮತಗಟ್ಟೆಗೆ ಬಂದು ಸಾವು ಕಂಡ ಘಟನೆಗಳು ಈ ಬಾರಿ ಹೆಚ್ಚಿದ್ದು, ಮತದಾನದ ಖುಷಿಯಲ್ಲಿದ್ದವರಿಗೆ ಸಾವು ಬೆನ್ನಟ್ಟಿ ಬಲಿ ತೆಗೆದುಕೊಂಡ ಘಟನೆಗಳು ಕಹಿ ಅನುಭವ ನೀಡಿವೆ.

ಬೆಳಗಾವಿ ಜಿಲ್ಲೆಯ ಯರಝರವಿಯಲ್ಲಿ ಪಾರವ್ವ ಎಂಬ ವೃದ್ಧೆಯೊಬ್ಬರು ಮತದಾನ ಮಾಡುವ ಮುನ್ನವೇ ಮತಗಟ್ಟೆಯಲ್ಲಿ ಅಸುನೀಗಿದ್ದರೆ, ಚಾಮರಾಜನಗರದ ಮಹದೇಶ್ವರ ಬೆಟ್ಟದ ಏರನಕಲ್ಲು ಎಂಬಲ್ಲಿ ಮತದಾನಕ್ಕೆ ಹೊರಟಿದ್ದ ವ್ಯಕ್ತಿಯೊಬ್ಬರು ಆನೆ ದಾಳಿಗೆ ಮೃತಪಟ್ಟಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ರೇಣುಕಾಪುರದ ಮತಗಟ್ಟೆ ಸಂಖ್ಯೆ 97ರ ಬಳಿ ಅಮೀರ್ ಸಾಬ್ ಎಂಬುವವರು ಮತದಾನದ ಬಳಿಕ ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗೆಜ್ಜೆಬಾವಿಯಲ್ಲಿ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿ ಹಿಂದಿರುಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ರಾಮಣ್ಣ ಬೋವಿ (60) ಎಂಬುವವರು ರಕ್ತದೊತ್ತಡ ಕುಸಿತವಾಗಿ ಮೃತಪಟ್ಟಿದ್ದರೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ಮತದಾನ ಮಾಡಿ ಮತಗಟ್ಟೆಯಿಂದ ಹೊರಬರುತ್ತಿದ್ದ ನಂತರ ಜಯಣ್ಣ (49) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

https://pragati.taskdun.com/exit-poll-congress-the-largest-party/
https://pragati.taskdun.com/a-senior-citizen-couple-refused-to-vote-from-home-and-came-to-the-polling-booth-to-vote/
https://pragati.taskdun.com/archaeologists-have-discovered-the-sunken-ruins-of-a-7000-year-old-road-under-the-mediterranean-sea/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button